ಮೈಸೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, 4 ಮೊಬೈಲ್ ಹಾಗೂ 18,500 ರೂ. ನಗದ ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದು, ನೇಪಾಳ ಮೂಲದ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.
ವಿಜಯನಗರದ 4ನೇ ಕ್ರಾಸ್ನ ಮನೆಯೊಂದರಲ್ಲಿ ಹುಡುಗಿಯರನ್ನು ಕರೆಯಿಸಿ ಅವರಿಗೆ ಹಣದ ಆಮಿಷಯೊಡ್ಡಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂದು ಸಿಸಿಬಿ ಘಟಕಕ್ಕೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಿಜಯನಗರ ಪೊಲೀಸರೊಂದಿಗೆ ಸೇರಿ ಸಿಸಿಬಿ ದಾಳಿ ಮಾಡಿದೆ.
ಹೊರ ರಾಜ್ಯದ ಹುಡುಗಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು, ವೇಶ್ಯಾವಾಟಿಕೆ ನಡೆಸಲು ಉಪಯೋಗಿಸುತ್ತಿದ್ದ 4 ಮೊಬೈಲ್, 18,500 ರೂ. ಹಣ ವಶಪಡಿಸಿಕೊಳ್ಳಲಾಗಿದೆ. ನೇಪಾಳದ ಮಹಿಳೆಯನ್ನು ರಕ್ಷಿಸಿ ಸ್ತ್ರೀ ಸೇವಾನಿಕೇತನದಲ್ಲಿ ಅಶ್ರಯ ಕಲ್ಪಿಸಿ ಕೊಡಲಾಗಿದೆ.