ಮೈಸೂರು: ಪ್ರಕರಣವೊಂದರ ಮಾಹಿತಿ ಪಡೆಯಲು ಪೊಲೀಸ್ ಠಾಣೆಗೆ ಹೋದ ವಕೀಲೆ ಜೊತೆ, ಪೊಲೀಸ್ ಇನ್ಸ್ಪೆಕ್ಟರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಕಲಾಪವನ್ನು ವಕೀಲರು ಬಹಿಷ್ಕರಿಸಿದ ಘಟನೆ ನಡೆದಿದೆ.
ವಕೀಲೆಯೊಬ್ಬರು ಪ್ರಕರಣವೊಂದರ ಮಾಹಿತಿ ಪಡೆಯಲು ಕುವೆಂಪು ನಗರ ಠಾಣೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಠಾಣೆಯ ಇನ್ಸ್ಪೆಕ್ಟರ್ ರಾಜು ಎಂಬವರು ಸರಿಯಾಗಿ ಮಾಹಿತಿ ನೀಡದೆ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ, ವಕೀಲೆ ಜಿಲ್ಲಾ ವಕೀಲರ ಸಂಘಕ್ಕೆ ದೂರು ನೀಡಿದ್ದಾರೆ.
ಈ ದೂರಿನ ಅನ್ವಯ ಇನ್ಸ್ಪೆಕ್ಟರ್ ಕ್ರಮವನ್ನು ಖಂಡಿಸಿ ನೆನ್ನೆ ಮೈಸೂರು ನ್ಯಾಯಾಲಯದ ಕಲಾಪವನ್ನು ವಕೀಲರು ಬಹಿಷ್ಕಾರಿಸಿ, ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.