ETV Bharat / city

ಅನರ್ಹರು ಅನರ್ಹರೇ... ಅನರ್ಹರ ವಿರುದ್ಧ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ

ಮೈತ್ರಿ ಸರ್ಕಾರ ಉರುಳಲು ಕಾರಣರಾದ ಅನರ್ಹ ಶಾಸಕರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮುಂದುವರೆಸಿದ್ದು, ಅನರ್ಹರು ಅನರ್ಹರೇ ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯ
author img

By

Published : Nov 16, 2019, 11:20 AM IST

ಮೈಸೂರು: ಕೋರ್ಟ್‌ ತೀರ್ಪು ಬಂದ ನಂತರ ಆಪರೇಷನ್ ಕಮಲದ ಸತ್ಯವನ್ನು ಒಬ್ಬೊಬ್ಬರಾಗಿ ಬಾಯ್ಬಿಡುತ್ತಿದ್ದು, ಇದು ಜನರಿಗೆ ಅರ್ಥವಾಗುತ್ತದೆ, ಇವರೆಲ್ಲ ಅನರ್ಹರೇ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದರು.

ಅನರ್ಹರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಇಂದು ತಮ್ಮ ಮನೆ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆಪರೇಷನ್ ಕಮಲದ ರಹಸ್ಯವನ್ನು ಕೋರ್ಟ್ ತೀರ್ಪು ಬಂದ ನಂತರ ಒಬ್ಬೊಬ್ಬರು ಸತ್ಯ ಹೇಳುತ್ತಿದ್ದಾರೆ ಇದು ಜನರಿಗೆ ಅರ್ಥವಾಗುತ್ತದೆ. ಇವರೆಲ್ಲಾ ಅನರ್ಹರೇ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಅನರ್ಹತೆಯ ಪಟ್ಟ ಕಟ್ಟಿಕೊಂಡೆ ಜನರ ಬಳಿಗೆ ಹೋಗಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಅನರ್ಹರೆಲ್ಲಾ ತ್ಯಾಗಿಗಳಲ್ಲ ಇವರೆಲ್ಲ ಸ್ವಾರ್ಥಿಗಳು. ಇವರೇನು ಸ್ವಾತಂತ್ರ ಹೋರಾಟಗಾರರೇ ಎಂದು ಪ್ರಶ್ನಿಸಿದ ಅವರು, ಅನರ್ಹರೆಲ್ಲರನ್ನು ಗೆದ್ದು ಬಂದ ನಂತರ ಸಚಿವರಾಗಿ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ? ಬಿಜೆಪಿ ಅವರಿಗೆ ಯಾವುದೇ ನೀತಿ ಸಂಹಿತೆ ಅಡ್ಡಿ ಇಲ್ಲವೇ? ಅಕ್ರಮದಿಂದ ಚುನಾವಣೆ ಎದುರಿಸಲು ಸರ್ಕಾರ ಸಜ್ಜಾಗಿದೆ. ಮೈಸೂರಿನಲ್ಲಿ ಸಿಕ್ಕಿದ ಯೋಗೇಶ್ವರ್ ಪೋಟೋ ಇರುವ ಸೀರೆಗಳೇ ಇದಕ್ಕೆ ಸಾಕ್ಷಿ ಎಂದರು.

ಬಿಜೆಪಿ ಉಪ ಚುನಾವಣೆಯಲ್ಲಿ 8 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಜೆಡಿಎಸ್​ಗೆ ಯಾವುದೇ ಸ್ಟಾಂಡ್ ಇಲ್ಲ ಇದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ ಚುನಾವಣೆಯ ನಂತರ ಬಿಜೆಪಿ ಸರ್ಕಾರದ ಸಂಕಷ್ಟದ ಬಗ್ಗೆ ಮಾತನಾಡೋಣ ಎಂದರು.

Intro:ಮೈಸೂರು: ಕೋರ್ಟ್‌ ತೀರ್ಪು ಬಂದ ನಂತರ ಆಪರೇಷನ್ ಕಮಲದ ಸತ್ಯವನ್ನು ಒಬ್ಬೊಬ್ಬರು ಹೇಳುತ್ತಿದ್ದು ಜನತೆಗೆ ಇದು ಅರ್ಥವಾಗುತ್ತದೆ, ಇವರೆಲ್ಲ ಅನರ್ಹರೇ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
Body:

ಇಂದು ತಮ್ಮ ಮನೆಯ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪರೇಷನ್ ಕಮಲದ ರಹಸ್ಯವನ್ನು ಕೋರ್ಟ್ ತೀರ್ಪು ಬಂದ ನಂತರ ಒಬ್ಬೊಬ್ಬರು ಸತ್ಯ ಹೇಳುತ್ತಿದ್ದಾರೆ ಇದು ಜನರಿಗೆ ಅರ್ಥ ವಾಗುತ್ತದೆ. ಇವರೆಲ್ಲಾ ಅನರ್ಹರೇ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಅನರ್ಹತೆಯ ಪಟ್ಟ ಕಟ್ಟಿಕೊಂಡೆ ಜನರ ಬಳಿಗೆ ಹೋಗಬೇಕು ಎಂದ ಸಿದ್ದರಾಮಯ್ಯ.
ಅನರ್ಹರೆಲ್ಲಾ ತ್ಯಾಗಿಗಳಲ್ಲ ಇವರೆಲ್ಲ ಸ್ವಾರ್ಥಿಗಳು. ಇವರೇನು ಸ್ವತಂತ್ರ ಹೋರಾಟಗಾರರೇ ಎಂದು ವಾಗ್ದಾಳಿ ನಡೆಸಿದ ಅವರು ಅನರ್ಹರಿಗೆಲ್ಲರಿಗೂ ಗೆದ್ದು ಬಂದ ನಂತರ ಸಚಿವರಾಗಿ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿರುವುದು ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ.
ಬಿಜೆಪಿ ಅವರಿಗೆ ಯಾವುದೇ ನೀತಿ ಸಂಹಿತೆ ಅಡ್ಡಿ ಇಲ್ಲವೇ, ಅಕ್ರಮದಿಂದ ಚುನಾವಣೆ ಎದುರಿಸಲು ಸಜ್ಜಾಗಿದೆ ಇದಕ್ಕೆ ಯೋಗೇಶ್ವರ್ ಪೋಟೋ ಇರುವ ಸೀರೆಗಳೆ ಸಾಕ್ಷಿ.
ಬಿಜೆಪಿ ಉಪ ಚುನಾವಣೆಯಲ್ಲಿ ೮ ಸ್ಥಾನಗಳನ್ನು ಗೆಲ್ಲುವುದಿಲ್ಲ. ಉಪ ಚುನಾವಣೆ ನಂತರ ಬಿಜೆಪಿಗೆ ಸಂಕಷ್ಟ ಇದೆ ಎಂದ ಸಿದ್ದರಾಮಯ್ಯ,
ಜೆಡಿಎಸ್ ಗೆ ಯಾವುದೇ ಸ್ಟಾಂಡ್ ಇಲ್ಲ ಇದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ ಚುನಾವಣೆಯ ನಂತರ ಬಿಜೆಪಿ ಸರ್ಕಾರದ ಸಂಕಷ್ಟದ ಬಗ್ಗೆ ಮಾತನಾಡೋಣ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.