ಮೈಸೂರು: ಕಬಿನಿ ಜಲಾಶಯ ತುಂಬಲು ಕೇವಲ 5 ಅಡಿ ಬಾಕಿ ಇದ್ದು, ನದಿ ಪಾತ್ರದ ಗ್ರಾಮಗಳಿಗೆ ಆತಂಕ ಎದುರಾಗಿದೆ. ಕೇರಳದ ವಯನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಾಶಯಕ್ಕೆ ಯಥೇಚ್ಛ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,284 ಅಡಿಗಳಾಗಿದ್ದು, ಇಂದಿನ ಮಟ್ಟ 2,279 ಅಡಿಗಳಿಗೆ ತಲುಪಿದೆ.
ಜಲಾಶಯಕ್ಕೆ 18,543 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 2,875 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಒಳ ಹರಿವು 17,353 ಕ್ಯೂಸೆಕ್, ಹೊರ ಹರಿವು 2,875 ಕ್ಯೂಸೆಕ್ ಇದೆ. ನಿನ್ನೆಯಿಂದ ಜಲಾಶಯದ ಒಳಹರಿವು ಕೂಡ ಹೆಚ್ಚಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ನಿರಂತರ ಮಳೆ; ಬೆಳಗಾವಿ ಜಿಲ್ಲೆಯ ಸೇತುವೆಗಳು ಜಲಾವೃತ