ETV Bharat / city

ಕೆಂಪು ವಲಯದಿಂದ ಹಸಿರಿಗೆ ತಿರುಗುತ್ತಿದೆ ಸಾಂಸ್ಕೃತಿಕ ನಗರಿ - ಕೋವಿಡ್​-19

ರಾಜ್ಯದಲ್ಲಿ ಕೊರೊನಾ ಕೇಂದ್ರಬಿಂದುವಾಗಿದ್ದ ಮೈಸೂರು ಸದ್ಯ ಕೆಂಪು ವಲಯದಿಂದ ಹಸಿರು ವಲಯದತ್ತ ಮುಖ ಮಾಡುತ್ತಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕೇವಲ 2 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಕೊರೊನಾ ಕಗ್ಗಂಟಾಗಿದ್ದ ಜುಬಿಲಂಟ್​ ಪ್ರಕರಣಲ್ಲಿ ನಿಗಾದಲ್ಲಿದ್ದವರಲ್ಲಿಯೂ ಸೋಂಕು ಕಾಣಿಸಿಲ್ಲ.

no-new-corona-virus-cases-found-in-mysore
ಸಾಂಸ್ಕೃತಿಕ ನಗರಿ
author img

By

Published : May 1, 2020, 4:19 PM IST

ಮೈಸೂರು: ಕಳೆದೊಂದು ವಾರದಿಂದ ಸಾಂಸ್ಕೃತಿಕ ನಗರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಪರಿಣಾಮ, ನಗರ ಕೆಂಪು ವಲಯದಿಂದ ಹಸಿರು ವಲಯದತ್ತ ಮುಖಮಾಡಿದೆ.

ಪ್ರಾರಂಭದಲ್ಲಿ ಜುಬಿಲಂಟ್ ಹಾಗೂ ತಬ್ಲಿಘಿ ಜಮಾತ್ ಪ್ರಕರಣಗಳಿಂದ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೇವಲ 2 ಪ್ರಕರಣಗಳು ಮಾತ್ರ ವರದಿಯಾಗಿದೆ. 90 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಈಗಾಗಲೇ 65 ಜನ ಗುಣಮುಖರಾಗಿದ್ದು, 25 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೆಡ್ ಝೋನ್ ನಿಂದ ಗ್ರೀನ್‌ ಝೋನ್​ನತ್ತ ಸಾಂಸ್ಕೃತಿಕ ನಗರಿ

ಮುಖ್ಯವಾಗಿ 72 ವರ್ಷದ ಸೋಂಕಿತ ವ್ಯಕ್ತಿಯು ಸಹ ಗುಣಮುಖನಾಗಿದ್ದಾನೆ. ಅಲ್ಲದೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಉಳಿದ ರೋಗಿಗಳು ಸಹ ಗುಣಮುಖರಾಗಲಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೇವಲ 200 ಕ್ಕೂ ಹೆಚ್ಚು ಮಂದಿ ಮಾತ್ರ ಹೋಂ ಕ್ವಾರಂಟೈನ್​​ನಲ್ಲಿದ್ದು, ಸೋಮವಾರ ಅಥವಾ ಮಂಗಳವಾರ ಅವರಿಗೂ ಪರೀಕ್ಷೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 4762 ಜನರ ಮೇಲೆ ನಿಗಾ ವಹಿಸಲಾಗಿದ್ದು ಅದರಲ್ಲಿ 4,514 ಮಂದಿ 14 ದಿನದ ಐಸೊಲೇಶನ್ ಮುಗಿಸಿದ್ದಾರೆ. ಇದರಲ್ಲಿ 3,499 ಮಂದಿಗೆ ಮಾದರಿ ಪರೀಕ್ಷೆ ನಡೆಸಲಾಗಿದೆ. ಇನ್ನು 223 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದು ಅವರಿಗೆ ಮಾದರಿ ಪರೀಕ್ಷೆ ನಡೆಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುವ ಕೋವಿಡ್ ಬುಲೆಟಿನ್​ನಲ್ಲಿ ತಿಳಿಸಿದ್ದಾರೆ.

ನಂಜನಗೂಡು ನಿರಾಳ:

ಜುಬಿಲಂಟ್ ಕಾರ್ಖಾನೆಯ ಸೋಂಕಿನಿಂದ 1,000 ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್​ಗೆ ಒಳಗಾಗಿದ್ದ ನಂಜನಗೂಡು ಪಟ್ಟಣ ಈಗ ಕ್ವಾರಂಟೈನ್​ನ 14 ದಿನದ ಅವಧಿ ಮುಗಿದಿದ್ದು, ಸೋಂಕಿನ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಜನರು ಸ್ವಲ್ಪ ನಿರಾಳರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಕೆಲವು ಬಡಾವಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಅಲ್ಲದೆ ಕೊರೊನಾ ನಿಯಂತ್ರಣ ಅಧಿಕಾರಿಗಳಾದ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಸ್ಥಳೀಯ ತಹಶಿಲ್ದಾರ್ ಮಹೇಶ್ ಕುಮಾರ್ ಕ್ವಾರಂಟೈನ್ ಪ್ರದೇಶಗಳಿಗೆ ಭೇಟಿ ನೀಡಿ ಜನರಲ್ಲಿ ಧೈರ್ಯ ಜೊತೆಗೆ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.