ಮೈಸೂರು: ಐದು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
90 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದರು. ಆದರೆ ಮೇ 18 ರಂದು (ರೋಗಿ ಸಂಖ್ಯೆ 1225), ಮೇ 21 ರಂದು (ರೋಗಿಸಂಖ್ಯೆ 1510) ಒಟ್ಟು ಎರಡು ಪ್ರಕರಣಗಳು ಪತ್ತೆಯಾದವು.
![no corona case in mysore in five days](https://etvbharatimages.akamaized.net/etvbharat/prod-images/kn-mys-02-corona-vis-ka10003_26052020201311_2605f_1590504191_759.jpg)
ಆದರೆ, ಐದು ದಿನಗಳಿಂದ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗದೇ ಇರುವುದರಿಂದ ಜನರಿಗೆ ಆತಂಕ ದೂರವಾಗುತ್ತಿದೆ. 8,298 ಮಂದಿ ಶಂಕಿತರ ಮಾದರಿ ಪರೀಕ್ಷಿಸಿದ್ದು, ಅದರಲ್ಲಿ 8,206 ನೆಗೆಟಿವ್ ವರದಿ ಬಂದಿದೆ. ಒಟ್ಟಾರೆ 92 ಪ್ರಕರಣಗಳ ಪೈಕಿ 2 ಸಕ್ರಿಯವಾಗಿದೆ.
7 ದಿನಗಳಿಂದ 252 ಮಂದಿ ಫೆಸಿಲಿಟಿ ಕ್ವಾರೆಂಟೈನ್‌ನಲ್ಲಿದ್ದಾರೆ. 159 ಮಂದಿ ಹೋಂ ಕ್ವಾರೆಂಟೈನ್‌ನಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.