ETV Bharat / city

ಅದ್ಧೂರಿಯಾಗಿ ಜರುಗಿದ ನಂಜನಗೂಡಿನ ಗೌತಮ ಪಂಚಮಹಾರಥೋತ್ಸವ - Nanjangudu Pancha Maharathotsav in Mysore

ನಂಜನಗೂಡು ಪಂಚ ಮಹಾರಥೋತ್ಸವವು ಅಧ್ದೂರಿಯಿಂದ ಜರುಗಿತು. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯ ಭಕ್ತರು ರಥೋತ್ಸವಕ್ಕೆ ಆಗಮಿಸಿ ದೇವರ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ.

nanjangudu-pancha-maharathotsav-in-mysore
ಅದ್ಧೂರಿಯಾಗಿ ನಡೆದ ನಂಜನಗೂಡಿನ ಗೌತಮ ಪಂಚಮಹಾರಥೋತ್ಸವ
author img

By

Published : Mar 16, 2022, 4:07 PM IST

ಮೈಸೂರು: ಐತಿಹಾಸಿಕ ನಂಜನಗೂಡು ಗೌತಮ ಪಂಚಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಬುಧವಾರ ಮುಂಜಾನೆ 3.30ರ ಮಕರ ಲಗ್ನದಲ್ಲಿ ದಕ್ಷಿಣ ಕಾಶಿಯಲ್ಲಿ ವಿಜೃಂಭಣೆಯ ಪಂಚಮಹಾರಥೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು.

ಐದು ರಥಗಳಲ್ಲಿ ದೊಡ್ಡ ರಥದಲ್ಲಿ ಶ್ರೀಕಂಠೇಶ್ವರ ಸ್ವಾಮಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದು, ಎರಡನೇ ರಥದಲ್ಲಿ ಪಾರ್ವತಿದೇವಿ, ಮೂರನೇ ರಥದಲ್ಲಿ ಗಣಪತಿ, ನಾಲ್ಕನೇ ರಥದಲ್ಲಿ ಷಣ್ಮುಗ ಮತ್ತು ಐದನೇ ರಥದಲ್ಲಿ ಚಂಡಿಕೇಶ್ವರ ದೇವರುಗಳ ಪ್ರತಿಷ್ಠಾಪನೆ ಮಾಡಿ ಪಂಚ ಮಹಾರಥೋತ್ಸವ‌ದ ಅದ್ಧೂರಿ ಮೆರವಣಿಗೆಯನ್ನು ನಡೆಸಲಾಯಿತು.

ಅದ್ಧೂರಿಯಾಗಿ ನಡೆದ ನಂಜನಗೂಡಿನ ಗೌತಮ ಪಂಚಮಹಾರಥೋತ್ಸವ

ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಶಾಸಕ ಹರ್ಷವರ್ಧನ್‌ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಪಂಚಮಹಾರಥೋತ್ಸವದಲ್ಲಿ ದಿ. ಪುನೀತ್ ರಾಜ್ ಕುಮಾರ್ ಅವರ ಫೋಟೋ ಹಾಗೂ ಬಾವುಟ ಹಿಡಿದು ಅಭಿಮಾನಿಗಳು ಜೈಕಾರ ಕೂಗಿದರು. ಲಕ್ಷಾಂತರ ಭಕ್ತಗಣದ ಸಮ್ಮುಖದಲ್ಲಿ ಮಹಾರಥೋತ್ಸವ ನೆರವೇರಿತು.

ರಥೋತ್ಸವ ಸಂದರ್ಭ ಕಾಲು ಮುರಿದುಕೊಂಡ ವ್ಯಕ್ತಿ : ಪಂಚ ಮಹಾರಥೋತ್ಸವದಲ್ಲಿ ರಥವನ್ನು ಎಳೆಯುವ ಸಂದರ್ಭದಲ್ಲಿ ಉಂಟಾದ ನೂಕು ನುಗ್ಗಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಕಾಲು ಮುರಿದುಕೊಂಡಿರುವ ಘಟನೆ ನಡೆದಿದೆ. ಕಾಲು ಮುರಿತಕ್ಕೊಳಗಾದ ವ್ಯಕ್ತಿಯನ್ನು ನಂಜನಗೂಡು ಪಟ್ಟಣದ ಚಾಮಲಾಪುರದ ಹುಂಡಿ ಗ್ರಾಮದ ಯೋಗೇಶ್ ಎಂದು ಗುರುತಿಸಲಾಗಿದೆ.

ರಥೋತ್ಸವ ಸಂದರ್ಭ ಕಾಲು ಮುರಿದುಕೊಂಡ ವ್ಯಕ್ತಿ

ಕಾಲು ಮುರಿತಕ್ಕೊಳಗಾದ ತಕ್ಷಣ ಯೋಗೇಶ್ಅನ್ನು ಯುವ ಬ್ರೀಗೆಡ್ ನ ಯುವಕರು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಓದಿ : ಎಸಿಬಿ ದಾಳಿ: ಲೋಕೋಪಯೋಗಿ ಎಇಇ ಮನೆಯಲ್ಲಿ ಚಿನ್ನದ ಗಟ್ಟಿ ಪತ್ತೆ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.