ಮೈಸೂರು: ಕರಡಿ ಮುಂದೆ ಆರ್ಭಟಿಸಲು ಹೋದ ಹುಲಿಯೊಂದು ಅದರ ಕುಣಿತ ನೋಡಿ ಮೆತ್ತಗೆ ಜಾಗ ಖಾಲಿ ಮಾಡಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಎಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಸಫಾರಿಗೆ ಹೋಗಿದ್ದ ಪ್ರವಾಸಿಗರು, ಹುಲಿ-ಕರಡಿ ಆಟವನ್ನ ಕಣ್ತುಂಬಿಕೊಂಡಿದ್ದಾರೆ.
70 ದಿನಗಳ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಕೇಂದ್ರಗಳು ಓಪನ್ ಆಗಿದ್ದು, ಮೂರು ದಿನಗಳಿಂದ ಸಫಾರಿಗೆ ಅವಕಾಶ ಸಿಕ್ಕಿರುವುದರಿಂದ ಸಫಾರಿ ಪ್ರಿಯರಿಗೆ ಕಾಡು ಪರಿಸರ ಮುದ ನೀಡಿದರೆ, ಪ್ರಾಣಿಗಳ ಆಟ ಸಂತೋಷ ನೀಡುತ್ತಿದೆ.