ETV Bharat / city

UPSC Results: ಅಂಧತ್ವ ಮೆಟ್ಟಿ ನಿಂತ ಮೈಸೂರಿನ ಮೇಘನಾ.. ಸತತ ಎರಡನೇ ಬಾರಿ ಪರೀಕ್ಷೆ ಪಾಸ್ - ಮೈಸೂರು

2015 ರಲ್ಲಿ ಕೆಎಎಸ್​ನಲ್ಲಿ 11 ನೇ ರ್‍ಯಾಂಕ್ ಪಡೆದು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಖಜಾನೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಟಿ. ಮೇಘನಾ 2021ರ ಯುಪಿಎಸ್​ಸಿಯಲ್ಲಿ 425 ನೇ ರ್‍ಯಾಂಕ್ ಗಳಿಸಿದ್ದಾರೆ.

UPSC 2021 Results
ದೃಷ್ಟಿ ವಿಶೇಷ ಚೇತನೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಟಾಪರ್
author img

By

Published : May 30, 2022, 7:10 PM IST

Updated : May 30, 2022, 7:49 PM IST

ಮೈಸೂರು/ಬೆಂಗಳೂರು: ದೃಷ್ಟಿ ವಿಶೇಷ ಚೇತನೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮದ ಕುಡಕೂಡಿನ ತಾಂಡವ ಮೂರ್ತಿ ಮತ್ತು ನವನೀತ ದಂಪತಿಯ ಪುತ್ರಿ ಕೆ.ಟಿ. ಮೇಘನಾ ಯುಪಿಎಸ್​ಸಿಯಲ್ಲಿ 425 ನೇ ರ್‍ಯಾಂಕ್ ಗಳಿಸಿದ್ದಾರೆ.

2020ರಲ್ಲೂ ಯುಪಿಎಸ್​ಸಿಯಲ್ಲಿ 465 ನೇ ರ್‍ಯಾಂಕ್ ಪಡೆದಿದ್ದ ಮೇಘನಾ ಮತ್ತೆ 2021ರಲ್ಲಿ ಪರೀಕ್ಷೆ ಬರೆದು 425ನೇ ರ್‍ಯಾಂಕ್ ಪಡೆದಿದ್ದಾರೆ. 2015 ರಲ್ಲಿ ಕೆಎಎಸ್​ನಲ್ಲಿ 11 ನೇ ರ್‍ಯಾಂಕ್ ಪಡೆದು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಖಜಾನೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ. 10ನೇ ತರಗತಿಯಲ್ಲಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ 70 ರಷ್ಟು ದೃಷ್ಟಿ ಕಳೆದುಕೊಂಡಿದ್ದ ಮೇಘನಾ ಅವರು ಈ ಸಮಸ್ಯೆ ಮೆಟ್ಟಿನಿಂತು ಯುಪಿಎಸ್​ಸಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ.

ಯುಪಿಎಸ್​ಸಿ ಪರೀಕ್ಷೆ ಪಾಸಾದ ಮೇಘನಾ
ಯುಪಿಎಸ್​ಸಿ ಪರೀಕ್ಷೆ ಪಾಸಾದ ಮೇಘನಾ

ಇದನ್ನೂ ಓದಿ: ಆರು ವರ್ಷಗಳ ನಿರಂತರ ಶ್ರಮ; UPSC ಸಾಧನೆ ಕುರಿತು ಸಂತಸ ಹಂಚಿಕೊಂಡ ಬೆಳಗಾವಿಯ ಸಾಹಿತ್ಯ

ಬೆಂಗಳೂರಲ್ಲಿ ಶಿಕ್ಷಣ: ಸಮಸ್ಯೆ ಎದುರಿಸುತ್ತಿದ್ದರೂ ಸಾಧನೆ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮೇಘನಾ. ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರೂ ತಮ್ಮ ಜ್ಞಾನದಿಂದ ಬದುಕಿನ ದೃಷ್ಟಿ ಕಂಡುಕೊಂಡಿರುವ ಇವರು ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಶಿಕ್ಷಣ ಪಡೆದಿದ್ದಾರೆ. ಮಗಳ ಸಾಧನೆ ಬಗ್ಗೆ ಪೋಷಕರು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

516ನೇ ರ್‍ಯಾಂಕ್ ಪಡೆದಿರುವ ಮಹಮ್ಮದ್ ಸಿದ್ದಿಕ್ ಷರೀಫ್

ನಮ್ಮ ಸಾಮರ್ಥ್ಯ ಹೆಚ್ಚಿಸುವ ಯುಪಿಎಸ್ಸಿ ಪರೀಕ್ಷೆ: ಯುಪಿಎಸ್ಸಿ ಪ್ರಯಾಣವು ಜೀವನದ ದಿಕ್ಕನ್ನೇ ಬದಲಾಯಿಸಿದ್ದು, ನಮ್ಮ ಸಾಮರ್ಥ್ಯ ಹೆಚ್ಚಿಸುತ್ತೆ ಎಂದು 516ನೇ ರ್‍ಯಾಂಕ್ ಪಡೆದಿರುವ ಮಹಮ್ಮದ್ ಸಿದ್ದಿಕ್ ಷರೀಫ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ನನ್ನ ಸಾಧನೆಗೆ ನಮ್ಮ ಕುಟುಂಬದವರಿಗೆ, ಮಾರ್ಗದರ್ಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

(ಓದಿ: ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ಪ್ರಶಾಂತ್​.. ರಾಜ್ಯದ ಒಂದೇ ಸಂಸ್ಥೆಯ 20 ಅಭ್ಯರ್ಥಿಗಳು ಆಯ್ಕೆ)

Last Updated : May 30, 2022, 7:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.