ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಆರೋಪಿಯೋರ್ವನ ತಾಯಿ, ಮಗನನ್ನು ಅರೆಸ್ಟ್ ಮಾಡಿದ್ದಕ್ಕೆ ಕಣ್ಣೀರು ಸುರಿಸುತ್ತಿದ್ದಾರೆ.
ತಮಿಳುನಾಡಿನ ತಾಳವಾಡಿ ತಾಲೂಕಿನ ಸೂಸಿಪುರಂ ಗ್ರಾಮದ ನಿವಾಸಿ ಆರೋಪಿ ಭೂಪತಿಯನ್ನು ಬಂಧಿಸಿದ್ದಕ್ಕೆ ಆತನ ತಾಯಿ, "ಮಲಗಿದ್ದ ಮಗನನ್ನು ಯಾಕೆ ಕರೆದುಕೊಂಡು ಹೋದರು ಎಂಬುದು ಗೊತ್ತಿಲ್ಲ" ಅಂತ ಕಣ್ಣೀರು ಹಾಕುತ್ತಿದ್ದಾರೆ.
"ಶನಿವಾರ ಮುಂಜಾನೆ ಏಕಾಏಕಿ ಮನೆಗೆ ನುಗ್ಗಿದ ಪೊಲೀಸರು ಮಗನನ್ನು ಕರೆದುಕೊಂಡು ಹೋಗುತ್ತಿದ್ದಾಗ, ಯಾಕೆ ಆತನನ್ನು ಕರೆದುಕೊಂಡು ಹೋಗ್ತೀರಿ ಎಂದು ಕೇಳಿದೆ. ಆದರೆ ಅವರು ಏನೂ ಹೇಳಲಿಲ್ಲ. ಪೊಲೀಸರ ಬಳಿ ಅಂಗಲಾಚಿದ್ರೂ ಬಿಡಲಿಲ್ಲ" ಎಂದರು.
ಆರೋಪಿ ಭೂಪತಿ ಕೂಲಿ ಕೆಲಸ ಮಾಡಿಕೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದ ಎಂದು ಅವರು ಹೇಳುತ್ತಾರೆ.