ETV Bharat / city

ಜಟ್ಟಿ ಕಾಳಗ ರದ್ದು​​: ಅರಮನೆ 'ಖಾಸಗಿ ದರ್ಬಾರ್' ಕಾರ್ಯಕ್ರಮ ಪಟ್ಟಿ ಹೀಗಿದೆ.. - Mysore dasara 2021

ಯದುವಂಶಸ್ಥ ಯದುವೀರ್​​ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದಿನಿಂದ ರತ್ನಖಚಿತ ಸಿಂಹಾಸನದಲ್ಲಿ ಆಸೀನರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಇನ್ನು ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಪರಂಪರೆಯ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿದೆ.

Mysore dasara
ಮೈಸೂರು ಅರಮನೆ 'ಖಾಸಗಿ ದರ್ಬಾರ್' ಕಾರ್ಯಕ್ರಮ
author img

By

Published : Oct 7, 2021, 9:51 AM IST

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚಾಲನೆ ನೀಡಿದ್ದು, ಅರಮನೆಯಲ್ಲಿ ಪಾರಂಪರಿಕ ದಸರಾ ಸಡಗರ ಸಂಭ್ರಮ ಕಳೆಗಟ್ಟಿದೆ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯೂ ಜಟ್ಟಿ ಕಾಳಗವನ್ನು ರದ್ದುಪಡಿಸಲಾಗಿದೆ. ಇಂದಿನಿಂದ ಅಕ್ಬೋಬರ್‌ 15 ರ ಮಧ್ಯಾಹ್ನ 2.30ರವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧವಿರಲಿದೆ.

ಯದುವಂಶಸ್ಥ ಯದುವೀರ್​​ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದಿನಿಂದ ಸಿಂಹಾಸನವೇರಿ ಖಾಸಗಿ ದರ್ಬಾರ್ ಮಾಡಲಿದ್ದಾರೆ. ಅಕ್ಬೋಬರ್‌ 14 ರಂದು ಅರಮನೆಯಲ್ಲಿ ಬೆಳಗ್ಗೆ 5.30ರಿಂದ ಆಯುಧ ಪೂಜಾ ವಿಧಿ ವಿಧಾನ ಆರಂಭವಾಗಲಿದೆ. ಅಂದು 7.45ಕ್ಕೆ ಧಾರ್ಮಿಕ ಪೂಜೆ, 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಅರಮನೆಯ ಆಯುಧಗಳಿಗೆ ಪೂಜೆಯ ಬಳಿಕ, ಅರಮನೆ ಕೋಡಿ ಸೋಮೇಶ್ವರ ದೇಗುಲದಲ್ಲಿಯೂ ವಿಶೇಷ ಪೂಜೆ ನೆರವೇರಲಿದೆ.

ಇದನ್ನೂ ಓದಿ: ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ನಾಡಹಬ್ಬ ದಸರೆಗೆ ಎಸ್‌.ಎಂ.ಕೃಷ್ಣ ಚಾಲನೆ

ಅಕ್ಬೋಬರ್‌ 15ರ ವಿಜಯ ದಶಮಿಯ ದಿನ ಅರಮನೆಯಲ್ಲಿ ಬೆಳಿಗ್ಗೆ 5.45ಕ್ಕೆ ಆನೆ, ಕುದುರೆ, ಹಸುಗಳ ಆಗಮನ, 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ, 7.20ರಿಂದ 7.40ರವರೆಗೆ ವಿಜಯ ದಶಮಿ‌ ಮೆರವಣಿಗೆ ನಡೆಯಲಿದೆ. ವಿಜಯ ದಶಮಿ ಮೆರವಣಿಗೆ ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಸಾಗಲಿದೆ.

ದೇಗುಲದಲ್ಲಿರುವ ಬನ್ನಿ ಮರಕ್ಕೆ ಯದುವೀರ್​​ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸಾಗಲಿದ್ದಾರೆ. ಅ.31ರಂದು ಸಿಂಹಾಸನ ವಿಂಗಡಿಸಿ ಖಜಾನೆಗೆ ರವಾನೆಯಾಗಲಿದೆ. ಅಂದು ಸಹ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ: ಅರಮನೆಯಲ್ಲಿ ರಾಜಮನೆತನದ ಪೂಜಾ ಕೈಂಕರ್ಯಗಳ ಸಂಪೂರ್ಣ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.