ETV Bharat / city

ಅಕಾಲಿಕ ಮಳೆ: ಮರದ ಕೆಳಗೆ ನಿಂತಿದ್ದ ರೈತ ಸಿಡಿಲು ಬಡಿದು ಸಾವು

ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹನಸೋಗೆ ಗ್ರಾಮದಲ್ಲಿ ನಡೆದಿದೆ.

author img

By

Published : Mar 19, 2022, 9:28 PM IST

farmer died
farmer died

ಮೈಸೂರು: ಅಕಾಲಿಕ ಮಳೆಗೆ ಜಿಲ್ಲೆಯ ರೈತರೊಬ್ಬರು ಬಲಿಯಾಗಿದ್ದಾರೆ. ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದ ಸಿದ್ದಲಿಂಗ ನಾಯಕ (72) ಸಿಡಿಲು ಬಡಿದು ಇಂದು ಮೃತಪಟ್ಟಿದ್ದಾರೆ.

ಜಮೀನಿನ ಕೆಲಸ ಮುಗಿಸಿಕೊಂಡು ರೈತ ಮನೆಗೆ ತೆರಳುವಾಗ ಮಳೆ ಆರಂಭವಾಗಿದೆ. ಬಳಿಕ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.‌

ಗುಡುಗು ಸಹಿತ ಮಳೆ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮೈಸೂರಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿ, ವಾಹನ ಸವಾರರು ಪರದಾಡುವಂತಾಯಿತು.

(ಇದನ್ನೂ ಓದಿ: ಒಂದಲ್ಲ, ಎರಡಲ್ಲ; ಬರೋಬ್ಬರಿ 500 ಸಲ ವ್ಯಕ್ತಿಗೆ ಕಚ್ಚಿವೆಯಂತೆ ಹಾವುಗಳು!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.