ETV Bharat / city

ಬಸ್ ಡಿಪೋ ಮ್ಯಾನೇಜರ್ ಹಾಗೂ ಚಾಲಕನ ನಡುವಿನ ಜಗಳ: ವಿಡಿಯೋ ವೈರಲ್

author img

By

Published : Feb 22, 2020, 1:01 PM IST

ಜಿಲ್ಲೆಯ ಕೆ.ಆರ್.ನಗರದ ಡಿಪೋ ಮ್ಯಾನೇಜರ್ ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿರುವ ವಿಡಿಯೋ ತಡವಾಗಿ ವೈರಲ್ ಆಗಿದೆ.

bus-depot-manager-and-the-driver
ಬಸ್ ಡಿಪೋ ಮ್ಯಾನೆಜರ್ ಹಾಗೂ ಚಾಲಕ ನಡುವಿನ ಜಗಳ

ಮೈಸೂರು: ಡ್ಯೂಟಿ ನೀಡುವ ವಿಚಾರದಲ್ಲಿ ಡಿಪೋ ಮ್ಯಾನೇಜರ್ ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿರುವ ವಿಡಿಯೋ ವೈರಲ್ ಆಗಿದೆ.

ಜಿಲ್ಲೆಯ ಕೆ. ಆರ್. ನಗರ ಬಸ್ ಡಿಪೋನಲ್ಲಿ ಕಳೆದ ಡಿಸೆಂಬರ್ 9 ರಂದು ಈ ಘಟನೆ ನಡೆದಿದೆ. ಚಾಲಕ ಚರಣಬಸಯ್ಯ ಎಂಬುವವರು ಡಿಪೋ ಮ್ಯಾನೇಜರ್ ಪಾಪನಾಯಕರನ್ನು ಡ್ಯೂಟಿ ಕೇಳಲು ಬಂದ ಸಂದರ್ಭದಲ್ಲಿ ಮ್ಯಾನೇಜರ್ ಡ್ಯೂಟಿ ನೀಡಲು ಲಂಚ ಕೇಳಿದ ಮಾತನ್ನು ಚಾಲಕ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ನೋಡಿದ ಮ್ಯಾನೇಜರ್ ಆತನ‌ ಮೊಬೈಲ್ ಕಿತ್ತುಕೊಂಡಿದ್ದಾರೆ.

ಬಸ್ ಡಿಪೋ ಮ್ಯಾನೆಜರ್ ಹಾಗೂ ಚಾಲಕ ನಡುವಿನ ಜಗಳ

ಈ ಸಂಬಂಧ 2 ತಿಂಗಳ ಹಿಂದೆಯೇ ಚಾಲಕನಿಂದ ಕೆ. ಆರ್. ನಗರ ಪೋಲಿಸ್ ಠಾಣೆಗೆ ದೂರು ದಾಖಲಾಗಿದೆ. ಜೊತೆಗೆ ಇಲಾಖೆ ತನಿಖೆ ಕೂಡಾ ನಡೆಸುತ್ತಿದ್ದು, ಚಾಲಕ ಇದೇ ಡಿಪೋನಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೂ ಈ ವಿಡಿಯೋ ವೈರಲ್ ಆಗಿದ್ದು ಏಕೆ ಎಂಬುದು ತಿಳಿಯುತ್ತಿಲ್ಲ ಎಂದು ಡಿಪೋ ಮ್ಯಾನೇಜರ್ ಪಾಪನಾಯಕ್ ಹೇಳುತ್ತಾರೆ. ಈ ಮಧ್ಯೆ ನಾಳೆ ಕೆ. ಆರ್. ನಗರ ಬಸ್ ಡಿಪೋ ಸಂಘದ ಚುನಾವಣೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.