ETV Bharat / entertainment

ತೆರೆಹಂಚಿಕೊಂಡ ರಮೇಶ್ ಅರವಿಂದ್ - ಗೋಲ್ಡನ್‌ ಸ್ಟಾರ್ ಗಣೇಶ್: ಸೆಟ್ಟೇರಿತು ಸ್ಯಾಂಡಲ್‌ವುಡ್‌ ತ್ಯಾಗರಾಜರ ಸಿನಿಮಾ - Yours Sincerely RAAM - YOURS SINCERELY RAAM

ರಮೇಶ್ ಅರವಿಂದ್ ಹಾಗೂ ಗಣೇಶ್ ಕಾಂಬಿನೇಶನ್​​ನ ಹೊಸ ಚಿತ್ರಕ್ಕೆ ''Your's sincerely ರಾಮ್'' ಎಂಬ ಶೀರ್ಷಿಕೆ ಇಡಲಾಗಿದೆ. ಫಸ್ಟ್​ ಲುಕ್​ ಟೀಸರ್​​ ಅನಾವರಣಗೊಂಡಿದ್ದು, ಪ್ರೇಕ್ಷಕರು ಸಿನಿಮಾ ಕುರಿತು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Yours Sincerely RAAM film team
''Your's sincerely ರಾಮ್'' (ETV Bharat)
author img

By ETV Bharat Karnataka Team

Published : Sep 7, 2024, 6:03 PM IST

ಕನ್ನಡ ಚಿತ್ರರಂಗದ ತ್ಯಾಗರಾಜರು ಎಂದೇ ಜನಪ್ರಿಯರಾಗಿರುವ ಮಿಸ್ಟರ್ ಪರ್ಫೆಕ್ಟ್​​ ರಮೇಶ್ ಅರವಿಂದ್ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್ ಅಭಿನಯದ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗೆ ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಮುಹೂರ್ತ ಸಮಾರಂಭ ನೆರವೇರಿದೆ. ನಟಿ ಕಂ ನಿರೂಪಕಿ ಜಾನ್ವಿ ರಾಯಲ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ರೆ, ನಿರ್ದೇಶಕ ವಿಖ್ಯಾತ್ ಪತ್ನಿ ಸ್ವಾತಿ ವಿಖ್ಯಾತ್ ಕ್ಯಾಮರಾಗೆ ಚಾಲನೆ ಕೊಟ್ರು.

Yours Sincerely RAAM film team
''Your's sincerely ರಾಮ್'' ಮುಹೂರ್ತ ಸಮಾರಂಭ (ETV Bharat)

ಚಂದನವನದ ಬಹುಬೇಡಿಕೆ ತಾರೆಯರಾದ ರಮೇಶ್ ಅರವಿಂದ್ ಹಾಗೂ ಗಣೇಶ್ ಕಾಂಬಿನೇಶನ್​​ನ ಹೊಸ ಸಿನಿಮಾಗೆ ''Your's sincerely ರಾಮ್'' ಎಂಬ ಕ್ಲಾಸ್ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದ್ದು, ಬಹಳ ಇಂಪ್ರೆಸಿವ್ ಆಗಿ ಮೂಡಿಬಂದಿದೆ.

ತಮ್ಮ ಚಿತ್ರದ ಬಗ್ಗೆ ನಟ ರಮೇಶ್ ಅರವಿಂದ್ ಮಾತನಾಡಿ, ವಿಖ್ಯಾತ್ ಪರಿಚಯ ಆಗಿದ್ದು 9 ವರ್ಷಗಳ ಹಿಂದೆ. ಪುಷ್ಪಕ ವಿಮಾನ ಕಥೆಯನ್ನು ಮೊದಲು ಹೇಳಲು ಬಂದರು. ಅಂದಿನಿಂದ ಇಂದಿನವರೆಗೂ ಅವರನ್ನು ನೋಡಿಕೊಂಡು ಬರುತ್ತಿದ್ದೇನೆ. ಅವರ ಸೌಂದರ್ಯ ಪ್ರಜ್ಞೆ ತುಂಬಾನೆ ಚೆನ್ನಾಗಿದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್​ಗಳಲ್ಲಿ ಸೂಕ್ಷ್ಮ ಮನೋಭಾವವಿದೆ. ಅವರು ಈ ಚಿತ್ರ ನಿರ್ದೇಶನ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಇದು ನಿಮ್ಮ ಮೊದಲ ಪಯಣ. ಸತ್ಯ ಮತ್ತು ವಿಖ್ಯಾತ್ ಇಬ್ಬರಲ್ಲಿ ಬಹಳ ಉತ್ಸವವಿದೆ. ಗಣೇಶ್ ಮತ್ತು ನನ್ನ ಕಾಂಬಿನೇಶನ್​​ ನಿಮಗೆ ಎಷ್ಟು ಖುಷಿ ಕೊಡುತ್ತದೆಯೋ ನಮಗೂ ಅಷ್ಟೇ ಖುಷಿ ಕೊಡುತ್ತದೆ ಎಂದು ತಿಳಿಸಿದರು.

Yours Sincerely RAAM film team
''Your's sincerely ರಾಮ್'' ಚಿತ್ರತಂಡ (ETV Bharat)

ಇದನ್ನೂ ಓದಿ: ಜೂ.ಎನ್​​ಟಿಆರ್ ಅಭಿನಯದ 'ದೇವರ' ಟ್ರೇಲರ್​​ ಬಿಡುಗಡೆಗೆ ಮುಹೂರ್ತ ಫಿಕ್ಸ್: ಪೋಸ್ಟರ್ ರಿಲೀಸ್ - Devara Trailer

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ಗೌರಿ ಗಣೇಶ ಹಬ್ಬದ ಸಂದರ್ಭ ''your's sincerely ರಾಮ್'' ಘೋಷಣೆಯಾಗಿದೆ. ಚಿಕ್ಕ ಗ್ಲಿಂಪ್ಸ್ ವೀಕ್ಷಿಸಿದ್ದೀರಿ. ಇಬ್ಬರ ನಡುವಿನ ಸಂಬಂಧ ಬೇರೆ ರೀತಿಯ ಫೀಲ್ ಕೊಡುತ್ತದೆ, ಬೇರೆ ಪ್ರಪಂಚಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುವಂತಹ ಕಥೆ ಇದು. ಗ್ಲಿಂಪ್ಸ್​​ನ ನೂರರಷ್ಟು ಭಾವನೆಗಳು ಸಿನಿಮಾದಲ್ಲಿರಲಿದೆ. ಪ್ರತೀ ಸೀನ್, ಸ್ಕ್ರೀನ್ ಪ್ಲೇ ಉತ್ತಮವಾಗಿರಲಿದೆ. ರಮೇಶ್ ಸರ್ ಜೊತೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿ ಕೊಟ್ಟಿದೆ. ರಮೇಶ್ ಸರ್ ಅದ್ಭುತ ನಟ. ವಿಖ್ಯಾತ್ ಫ್ಯಾಷನೇಟೆಡ್ ಡೈರೆಕ್ಟರ್. ನಿರ್ಮಾಪಕ ಸತ್ಯ ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದರು.

ಇದನ್ನೂ ಓದಿ: ಸಮುದ್ರದ 82 ಅಡಿ ಆಳದಲ್ಲಿ ಪ್ರೇಮ್ ಪುತ್ರಿಯ ಸಿನಿಮಾ ಟೈಟಲ್​ ಅನೌನ್ಸ್: ಮಹೇಶ್ ಬಾಬು ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ - Ammu Movie

ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಸತ್ಯ ರಾಯಲ ಅವರು ಈ ರಾಮ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ನವೀನ್ ಕುಮಾರ್ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಹರೀಶ್ ಕೊಮ್ಮೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಜೆ ಅನೂಪ್ ಸೀಳಿನ್ ಸಂಗೀತ ಒದಗಿಸುತ್ತಿದ್ದಾರೆ. ಗುಣ ಅವರ ಕಲಾ ನಿರ್ದೇಶನ ಮತ್ತು ಪ್ರಶಾಂತ್ ರಾಜಪ್ಪ‌, ಯದುನಂದನ್, ಸಚಿನ್ ಸಂಭಾಷಣೆ ಈ ಚಿತ್ರಕ್ಕಿದೆ. ಚಿತ್ರದ ಆಡಿಯೋ ಹಕ್ಕುಗಳು ಆನಂದ್ ಆಡಿಯೋಗೆ ದಾಖಲೆ ಬೆಲೆಗೆ ಮಾರಾಟವಾಗಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗವನ್ನು ಮುಂದಿನ ದಿನಗಳಲ್ಲಿ ಪರಿಚಯಿಸಲಿದೆ ಚಿತ್ರತಂಡ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.