ಮೈಸೂರು : ನಗರದ ಚಿನ್ನ, ಬೆಳ್ಳಿ ಅಂಗಡಿಯಲ್ಲಿ ದರೋಡೆ ಮಾಡಲು ಬಂದ ದರೋಡೆಕೋರರ ಸಿಸಿಟಿವಿ ಫೋಟೋಗಳನ್ನು ಬಿಡುಗಡೆ ಮಾಡಿ, ಸಾರ್ವಜನಿಕರು ಇವರ ಬಗ್ಗೆ ಮಾಹಿತಿ ಗೊತ್ತಾದರೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ನಗರದ ವಿದ್ಯಾರಣ್ಯಪುರಂನ ಮುಖ್ಯರಸ್ತೆಯಲ್ಲಿರುವ ಅಮೃತ ಗೋಲ್ಡ್ & ಸಿಲ್ವರ್ ಮಳಿಗೆಗೆ ನುಗ್ಗಿದ್ದ ಮೂವರು ದರೋಡೆಕೋರರು ಚಿನ್ನ, ಬೆಳ್ಳಿ ಕದಿಯಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಯತ್ನಿಸಿದ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಅಂಗಡಿಯೊಳಗಿದ್ದ ದಡದಹಳ್ಳಿ ನಿವಾಸಿ ಚಂದ್ರು ಎಂಬುವರಿಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ. ದರೋಡೆಕೋರರ ಸಿಸಿಟಿವಿ ಪೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಇವರ ಬಗ್ಗೆ ಮಾಹಿತಿ ಗೊತ್ತಾದರೆ ತಕ್ಷಣ ತಿಳಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ ಭೇಟಿ ನೀಡಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲಿಸಿದ್ದಾರೆ.