ETV Bharat / city

ಸ್ವಚ್ಛ ಸರ್ವೇಕ್ಷಣ-2021 ಪ್ರಶಸ್ತಿ ಪ್ರದಾನ..ಮೈಸೂರಿಗೆ''5 ಸ್ಟಾರ್​ ರ‍್ಯಾಂಕಿಂಗ್ '' ಪಟ್ಟ - ಇಂದೋರ್​​​ಗೆ ಸ್ವಚ್ಛ ನಗರಿ ಪಟ್ಟ

ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಇಂದು ಸ್ವಚ್ಛ ಸರ್ವೇಕ್ಷಣ 2021ರ ಪ್ರಶಸ್ತಿ ಘೋಷಿಸಿ, ಪ್ರದಾನ ಮಾಡಿದ್ದಾರೆ. ಮೈಸೂರಿಗೆ 5 ಸ್ಟಾರ್​ ರ‍್ಯಾಂಕಿಂಗ್ ಪ್ರಶಸ್ತಿ(5 star ranking city) ಸಿಕ್ಕಿದೆ.

ಸ್ವಚ್ಛ ಸರ್ವೇಕ್ಷಣ-2021 ಪ್ರಶಸ್ತಿ ಪ್ರದಾನ...ಮೈಸೂರಿಗೆ 5ನೇ ಸ್ಥಾನ
author img

By

Published : Nov 20, 2021, 1:49 PM IST

Updated : Nov 20, 2021, 2:13 PM IST

ಮೈಸೂರು: ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಇಂದು ಸ್ವಚ್ಛ ಸರ್ವೇಕ್ಷಣ 2021ರ(Swachh Survekshan Awards 2021) ಅನ್ವಯ ದೇಶದ 342 ನಗರಗಳಿಗೆ ಪ್ರಶಸ್ತಿ ಘೋಷಿಸಿ, ಪ್ರಧಾನ ಮಾಡಿದ್ದಾರೆ. ಮೈಸೂರಿಗೆ 5 ಸ್ಟಾರ್​ ರ‌್ಯಾಂಕಿಂಗ್(5 star ranking city) ಪಟ್ಟ ಸಿಕ್ಕಿದೆ.

ಇಂದು ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಪ್ರಶಸ್ತಿ ವಿಜೇತ ನಗರಗಳ ಹೆಸರನ್ನು ಘೋಷಿಸಿದರು. ಸತತ 5ನೇ ಬಾರಿಗೆ ಇಂದೋರ್ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸಿದೆ. ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ. ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ರಾಜ್ಯಗಳ ಸರ್ವೇಯಲ್ಲಿ ಛತ್ತೀಸ್​ಗಡ ಮೊದಲ ಸ್ಥಾನ ಪಡೆದಿದೆ. ಹಾಗೆಯೇ ಗಂಗಾ ನದಿ ಪಾತ್ರದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಾರಾಣಸಿ ಮೊದಲ ಸ್ಥಾನ ಪಡೆದಿದೆ.

ಇದನ್ನೂ ಓದಿ: ಯಾರಿಗೂ ಬೇಡ ಈ ಗ್ರಾಮಸ್ಥರ ಯಾತನೆ: ಹಳ್ಳದ ನೀರಲ್ಲಿ ನಿತ್ಯ ಸರ್ಕಸ್, ಮನ ಕಲಕುವಂತಿದೆ ವಿದ್ಯಾರ್ಥಿನಿಯ ಮನವಿ

ಮೇಯರ್ ಸುನಂದ ಪಾಲನೇತ್ರ, ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಆರೋಗ್ಯ ಅಧಿಕಾರಿ ಡಾ.ನಾಗರಾಜ್ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು. 10 ಲಕ್ಷ ಜನಸಂಖ್ಯೆ ಒಳಗಿನ ದೇಶದ 4000 ಮಹಾ ನಗರಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.

Last Updated : Nov 20, 2021, 2:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.