ETV Bharat / city

Mysore Gangrape ಪ್ರಕರಣ: ಯುವತಿ ಮೊಬೈಲ್​ ಸ್ವಿಚ್ ​ಆಫ್​​, ಆರೋಪಿಗಳಿಂದ ಗೊಂದಲದ ಹೇಳಿಕೆ

ಅರಮನೆ ನಗರಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವುದು ಒಂದು ಕಡೆಯಾದರೆ ತನಿಖೆಗೆ ಸಂತ್ರಸ್ತೆ ಸಹಕರಿಸದೆ ಮೊಬೈಲ್​ ಸ್ವಿಚ್​​ಆಫ್​​ ಮಾಡಿಕೊಂಡು ಪೋಷಕರ ಜೊತೆ ಮುಂಬೈಗೆ ಹೋಗಿದ್ದಾಳೆ.

mysore-gang-rape-case-updates
ಗ್ಯಾಂಗ್​ ರೇಪ್​ ಪ್ರಕರಣ
author img

By

Published : Aug 30, 2021, 5:39 PM IST

ಮೈಸೂರು: ಗ್ಯಾಂಗ್ ರೇಪ್(Gangrape) ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಸದ್ಯ ಸಂತ್ರಸ್ತೆಯ ಹೇಳಿಕೆ ಪಡೆಯಲು ಮುಂದಾಗಿದ್ದಾರೆ. ಆದರೆ ಯುವತಿ ಹಾಗೂ ಯುವತಿಯ ಪೋಷಕರ ಮೊಬೈಲ್ ಸ್ವಿಚ್ ಆಫ್​​​ ಆಗಿರುವುದು ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಅತ್ಯಾಚಾರ ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಮೈಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಐವರು ಆರೋಪಿಗಳು ಪೊಲೀಸರಿಗೆ ಸರಿಯಾದ ಹೇಳಿಕೆ ನೀಡದೇ ಸತಾಯಿಸುತ್ತಿದ್ದಾರೆ. ಮತ್ತೊಂದು ಕಡೆ ಈ ಆರೋಪಿಗಳಿಗೆ ಶಿಕ್ಷೆಯಾಗಬೇಕಾದರೆ ಸಂತ್ರಸ್ತೆ ದೂರು ಹಾಗೂ ಘಟನೆಯ ಬಗ್ಗೆ ಮಾಹಿತಿ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿಗಳನ್ನು ಗುರುತು ಹಿಡಿಯಬೇಕು.

ಆದರೆ ಇದ್ಯಾವುದಕ್ಕೂ ಬಾರದ ಸಂತ್ರಸ್ತೆ ಕುಟುಂಬದವರೊಂದಿಗೆ ಮುಂಬೈಗೆ ಹೋಗಿದ್ದಾಳೆ. ಅಲ್ಲದೆ, ತನ್ನ ಮೊಬೈಲ್ ಸ್ವಿಚ್​ ಆಫ್ ಮಾಡಿಕೊಂಡಿದ್ದಾಳೆ. ಇದರಿಂದ ಪೊಲೀಸರ ತನಿಖೆಗೆ ಅಡೆತಡೆ ಉಂಟಾಗಿದೆ.

ಅಲ್ಲದೆ, ಘಟನ ಸಂದರ್ಭದಲ್ಲಿ ಆರೋಪಿಗಳು ತಮಿಳು ಭಾಷೆಯಲ್ಲಿ ಮಾತನಾಡಿರುವುದು ಯುವತಿಯ ಮೊಬೈಲ್​ನಲ್ಲಿ ರೆಕಾರ್ಡ್​​ ಆಗಿದೆ. ಆ ಆಡಿಯೋವನ್ನು ಪಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ. ಆದ್ರೆ ಸಂತ್ರಸ್ತೆ ಪೊಲೀಸರಿಗೆ ಸರಿಯಾಗಿ ಸಹಕರಿಸದೆ ಫೋನ್​ ಸ್ವಿಚ್ ಆಫ್​​ ಮಾಡಿದ್ದಾಳೆ. ಜೊತೆಗೆ ಗ್ಯಾಂಗ್ ರೇಪ್ ಆರೋಪಿಗಳು ಪೊಲೀಸರಿಗೆ ತನಿಖೆ ವೇಳೆಯಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.