ETV Bharat / city

ರಾಜಕೀಯ ಬಿಟ್ಟು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದೆ: ಎಸ್.ಟಿ. ಸೋಮಶೇಖರ್ - Mysore District Minister S.T. Somashekhar news

ಉಸ್ತುವಾರಿ ಸಚಿವನಾಗಿ ಬಂದ ನಂತರ ಖುದ್ದಾಗಿ ಶ್ರೀನಿವಾಸ್ ಪ್ರಸಾದ್, ರಾಮದಾಸ್ ಮನೆಗೆ ಹೋಗಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಎಸ್.ಟಿ. ಸೋಮಶೇಖರ್
ಎಸ್.ಟಿ. ಸೋಮಶೇಖರ್
author img

By

Published : Apr 15, 2020, 12:45 PM IST

Updated : Apr 15, 2020, 12:52 PM IST

ಮೈಸೂರು: ಇಲ್ಲಿಗೆ ರಾಜಕೀಯ ಮಾಡಲು ಬಂದಿಲ್ಲ, ಇಂದಿನ ಸನ್ನಿವೇಶದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ‌.

ಈಟಿವಿ ಭಾರತನೊಂದಿಗೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್

ನಗರದಲ್ಲಿ ಈಟಿವಿ ಭಾರತನೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಗೆ ನಾನು ಉಸ್ತುವಾರಿ ಸಚಿವನಾಗಿ ಬಂದ ನಂತರ ಖುದ್ದಾಗಿ ಸಂಸದ ಶ್ರೀನಿವಾಸ್ ಪ್ರಸಾದ್, ಶಾಸಕ ರಾಮದಾಸ್ ಮನೆಗೆ ಹೋಗಿದ್ದೇನೆ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕಾಗಿದ್ದು ರಾಜಕೀಯ, ಗುಂಪುಗಾರಿಕೆ ಇಲ್ಲ. ಜುಬಿಲಿಯಂಟ್ ಕಾರ್ಖಾನೆಯ ಕೊರೊನಾ ಸೋಂಕಿತರು ದಿನದಿಂದ ದಿನಕ್ಕೆ ಗುಣವಾಗುತ್ತಿದ್ದು, ಅಲ್ಲಿ ಏನು ತೊಂದರೆ ಇಲ್ಲ. ನಂಜನಗೂಡು ಶೇಕಡಾ 99 ರಷ್ಟು ಲಾಕ್ ಡೌನ್ ಆಗಿದೆ. ಜುಬಿಲಿಯಂಟ್​ಗೆ ಸೋಂಕು ಹೇಗೆ ಬಂತು ಎಂಬ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳಿದ್ದಾರೆ. ಈ ಎಲ್ಲಾ ಆ್ಯಂಗಲ್​ನಿಂದಲೂ ತನಿಖೆ ಮಾಡುತ್ತಿದ್ದೇವೆ ಎಂದರು.

ಕೋವಿಡ್ ನಿಯಂತ್ರಣಕ್ಕೆ ವಿಶೇಷ ಅಧಿಕಾರಿಯಾಗಿ ಬಂದಿರುವ ಹರ್ಷ ಗುಪ್ತ ನೇಮಕದ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಮೈಸೂರಿನಲ್ಲಿ ಲಾಕ್ ಡೌನ್ ನಿಂದ ಪ್ರತಿನಿತ್ಯ ಬಿಡುವಿಲ್ಲದೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಖಾಸಗಿ ಸಂಸ್ಥೆ ಉಚಿತವಾಗಿ ಮೊಟ್ಟೆ ನೀಡುವ ಕೆಲಸವನ್ನು ಮಾಡುತ್ತಿದ್ದು, ಸಂಸ್ಥೆಗೆ ಧನ್ಯವಾದ ಅರ್ಪಿಸುತ್ತೇವೆ. ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಸಹ ಲೆಕ್ಕಿಸದೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರಗಳು ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ಮೈಸೂರಿನ ಎನ್.ಇ.ಸಿ.ಸಿ, ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರಿಗಾಗಿ ಲಾಕ್​ಡೌನ್​ ಮುಗಿಯುವವರೆಗೂ ಸುಮಾರು 10,000 ಮೊಟ್ಟೆಗಳನ್ನು ಉಚಿತವಾಗಿ ಕೊಡುವ ಕೆಲಸಕ್ಕೆ ಮುಂದಾಗಿದೆ ಎಂದರು.

ಪೌರ ಕಾರ್ಮಿಕರಿಗೆ ಮೊಟ್ಟೆ ವಿತರಣೆ
ಪೌರ ಕಾರ್ಮಿಕರಿಗೆ ಮೊಟ್ಟೆ ವಿತರಣೆ

ಇನ್ನು, ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದಲ್ಲಿ ಏ.15 ರಿಂದ ಮೇ.3 ರವರೆಗೆ ಪ್ರತಿದಿನ ಸಂಜೆ 6 ರ ನಂತರ ತರಕಾರಿ, ದಿನಸಿ ಪದಾರ್ಥ, ಹಣ್ಣಿನ ಅಂಗಡಿ ಒಳಗೊಂಡಂತೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸಿ ಕಡ್ಡಾಯವಾಗಿ ಮುಚ್ಚಲು ಆದೇಶಿಸಲಾಗಿದೆ. ಈ ಸಮಯದಲ್ಲಿ ವ್ಯಾಪಾರ ವಹಿವಾಟು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಪ್ರಕಟಣೆ
ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೊರಡಿಸಿರುವ ಪ್ರಕಟಣೆ

Last Updated : Apr 15, 2020, 12:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.