ETV Bharat / city

ಒಂದೇ ದಿನ 6 ಲಕ್ಷ.ರೂ ತೆರಿಗೆ ಸಂಗ್ರಹಿಸಿದ ಮೈಸೂರು ಮಹಾನಗರ ಪಾಲಿಕೆ - ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್

ಆಸ್ತಿ ತೆರಿಗೆ ಪಾವತಿಸದೇ ವಂಚಿಸುತ್ತಿದ್ದ ಅಂಗಡಿಗಳಿಗೆ ಇಂದು ಮಹಾನಗರ ಪಾಲಿಕೆ ದಿಡೀರ್ ದಾಳಿ ಮಾಡಿ ಸುಮಾರು 6 ಲಕ್ಷ ರೂ. ಸಂಗ್ರಹ ಮಾಡಿದೆ.

Mysore city corporation
ಮೈಸೂರು ಮಹಾನಗರ ಪಾಲಿಕೆ
author img

By

Published : Dec 3, 2020, 3:10 PM IST

ಮೈಸೂರು: ತೆರಿಗೆ ಹಣ ಪಾವತಿ ಮಾಡದೇ ಇರುವ ಅಂಗಡಿಗಳಿಗೆ ನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಒಂದೇ ದಿನದಲ್ಲಿ 6 ಲಕ್ಷ ರೂಪಾಯಿ ತೆರಿಗೆ ಸಂಗ್ರಹ ಮಾಡಿದ್ದಾರೆ.

ಆಸ್ತಿ ತೆರಿಗೆ ಸಂಗ್ರಹ ಚುರುಕುಗೊಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನ ಮಾಡುತ್ತಿರುವ ಮಹಾನಗರ ಪಾಲಿಕೆಯ ಅಧಿಕಾರಿಗಳು ಅಂಗಡಿಗಳಿಗೆ ತೆರಳಿ ತೆರಿಗೆ ಸಂಗ್ರಹಿಸುತ್ತಿದ್ದು , ನಗರದ ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ ಹಾಗೂ ಸುತ್ತಮುತ್ತಲಿನ ಅಂಗಡಿ ಮಳಿಗೆಗಳಿಗೆ ತೆರಳಿ ತೆರಿಗೆ ಕಲೆಕ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಅಂಬಾವಿಲಾಸ ಫೋಟೋ ಹಾಕಿ ಟ್ವಿಟರ್​ನಲ್ಲಿ ಇದರ ಮಹತ್ವ ಸಾರುತ್ತಿರುವ ವಿದೇಶಿಗರು

ಈ ಸಂದರ್ಭದಲ್ಲಿ ತೆರಿಗೆ ಹಣ ಪಾವತಿಸದ ಅಂಗಡಿಗಳನ್ನು ಬಂದ್ ಮಾಡುತ್ತಿದ್ದು, ಒಂದೇ ದಿನದಲ್ಲಿ 6 ಲಕ್ಷ ರೂಪಾಯಿ ತೆರಿಗೆ ಸಂಗ್ರಹಿಸಿದ್ದು, ಕೊರೊನಾ ಕಾರಣದಿಂದಾಗಿ ವ್ಯಾಪಾರ ನಡೆಯುತ್ತಿಲ್ಲ ಎಂಬ ಕಾರಣದಿಂದ ಮಾಲೀಕರಿಗೆ ಆಸ್ತಿ ತೆರಿಗೆ ಸಂಗ್ರಹ ಮಾಡಲು ಕಾಲಾವಕಾಶ ನೀಡಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದು, ತೆರಿಗೆ ಹಣ ಸಂಗ್ರಹಿಸಲು ಮುಂದಾಗಿದ್ದೇವೆ ಎನ್ನುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.