ETV Bharat / city

ಹುಣಸೂರು ಪೊಲೀಸರ ಭರ್ಜರಿ ಬೇಟೆ: ಅಂತರ್ ​ಜಿಲ್ಲಾ ಕಳ್ಳರ ಬಂಧನ - ಅಂತರ್ ​ಜಿಲ್ಲಾ ಕಳ್ಳರ ಬಂಧನ

ವಿವಿಧ ಜಿಲ್ಲೆಗಳಲ್ಲಿ ಬೈಕ್​ಗಳನ್ನ ಕದ್ದು ಮಾರಾಟ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನ ಹುಣಸೂರು ಪೊಲೀಸರು ಬಂಧಿಸಿ, 6 ಬೈಕ್​ಗಳನ್ನ ವಶಪಡಿಸಿಕೊಂಡಿದ್ದಾರೆ.

mys thiefs arrest
ಖದೀಮರ ಬಂಧನ
author img

By

Published : Oct 3, 2020, 12:46 PM IST

ಮೈಸೂರು: ಅಂತರ್​ ಜಿಲ್ಲಾ ಮೂವರು ಬೈಕ್ ಕಳ್ಳರನ್ನ ಹುಣಸೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 3 ಲಕ್ಷದ 40 ಸಾವಿರ ರೂಪಾಯಿ ಮೌಲ್ಯದ 6 ಬೈಕ್​​ಗಳನ್ನ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನ ಸೋಮವಾರಪೇಟೆಯ ಸುಬ್ರಮಣಿ ಅಲಿಯಾಸ್ ಸುಬ್ಬ (24), ಕುಶಾಲ ನಗರದ ವಿಕ್ಟರ್ ಅಲಿಯಾಸ್ ವಿಟ್ಟ (20) ಮತ್ತು ಮಧು ಅಲಿಯಾಸ್ ಮಧುಕರ್​ (21) ಎನ್ನಲಾಗಿದೆ. ಈ ಮೂವರು ಹುಣಸೂರು ಪಟ್ಟಣದಲ್ಲಿ ಕಳೆದ ಆಗಸ್ಟ್ 24ರಂದು ಬೈಕ್ ಕದ್ದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಹುಣಸೂರಿನಲ್ಲಿ 3 ಬೈಕ್, ಬಿಳಿಕೆರೆ, ಮಡಿಕೇರಿ, ಅರಕಲಗೂಡು ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಬೈಕ್ ಕದ್ದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣೆ ಬಳಿಕ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.