ಮೈಸೂರು : ಬಜೆಟ್ ಮಂಡನೆ ಧಿಕ್ಕರಿಸಿ ನಗರಸಭಾ ಸದಸ್ಯರು ಪ್ರತಿಭಟನೆ ನಡೆಸಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.
ಇಂದು ಬೆಳಗ್ಗೆ 10.30ಕ್ಕೆ 2021-22ನೇ ಸಾಲಿನ ಬಜೆಟ್ ಸಭೆ ಆರಂಭವಾಗಬೇಕಿತ್ತು. ಆದರೆ, ನಂಜನಗೂಡು ನಗರಸಭಾ ಉಪಾಧ್ಯಕ್ಷ ನಾಗಮಣಿ ಶಂಕರಪ್ಪ ಮತ್ತು ಕೆಲ ಸದಸ್ಯರು ಬಜೆಟ್ ಸಭೆಗೆ ಹಾಜರಾಗದೆ ಪ್ರತಿಭಟಿಸಿದರು.
ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ ಹಾಗೂ ಆಯುಕ್ತ ಕರಿಬಸವಯ್ಯ ಅವರು ಉಪಾಧ್ಯಕ್ಷರನ್ನು ಕಡೆಗಣಿಸಿದ್ದಾರೆ. ಯಾವುದೇ ವಿಚಾರಕ್ಕೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬಜೆಟ್ ಮಂಡನೆಗೂ ಮುನ್ನ ಸಭೆ ಕರೆದು ನಮ್ಮ ಸಲಹೆ-ಸೂಚನೆಗಳನ್ನು ಪಡೆಯಬೇಕಿತ್ತು.
ಸದಸ್ಯರು ಮತ್ತು ಉಪಾಧ್ಯಕ್ಷರ ಗಮನಕ್ಕೆ ತಾರದೆ ಬಜೆಟ್ ಪ್ರತಿ ತಯಾರು ಮಾಡಿದ್ದಾರೆಂದು ಆರೋಪಿಸಿ ನಂಜನಗೂಡು ನಗರಸಭಾ ಕಚೇರಿ ಎದುರು ಪ್ರತಿಭಟಿಸಿದರು.
ಓದಿ: ಸದನದಲ್ಲಿ ಮುಂದುವರೆದ ‘ಸಿಡಿ’ ವಾರ್.. ‘ಬ್ಲ್ಯೂ ಬಾಯ್ಸ್’ ಎಂದು ಧಿಕ್ಕಾರ ಕೂಗಿದ ವಿಪಕ್ಷ ಸದಸ್ಯರು