ETV Bharat / city

ಇದು ನಮ್ಮ ತಾತನದ್ದೇ ದೇಶ.. ಶಾಸಕ ತನ್ವೀರ್ ಸೇಠ್‌ಗೆ ಪ್ರತಾಪ್​ ಸಿಂಹ ತಿರುಗೇಟು!

author img

By

Published : Feb 6, 2022, 3:00 PM IST

Updated : Feb 6, 2022, 3:57 PM IST

ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಆದೇಶಕ್ಕೆ ಪ್ರತಿಕ್ರಿಯೆ ನೀಡಿ, ಸರ್ಕಾರಕ್ಕೆ, ಶಿಕ್ಷಣ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರದ ಆದೇಶವನ್ನು ಎಲ್ಲ ವಿದ್ಯಾರ್ಥಿಗಳು ಪಾಲನೆ ಮಾಡಬೇಕು..

mp prathap simha
ಸಂಸದ ಪ್ರತಾಪ್ ಸಿಂಹ

ಮೈಸೂರು : ಇದು ನಮ್ಮ ತಾತನದ್ದೇ ದೇಶ. ನಿಮ್ಮ ತಾತ ಕೂಡ ಹಿಂದೂ ಆಗಿದ್ರು ಎಂದು ಶಾಸಕ ತನ್ವೀರ್ ಸೇಠ್ ಅವರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ಶಾಸಕ ತನ್ವೀರ್ ಸೇಠ್‌ಗೆ ಪ್ರತಾಪ್​ ಸಿಂಹ ಪ್ರತಿಕ್ರಿಯೆ ನೀಡಿರುವುದು...

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನ್ವೀರ್ ಸೇಠ್ ಅವರ ಪೂರ್ವಜರು ಮೆಕ್ಕಾ-ಮದೀನಾದಿಂದ ಬಂದವರಲ್ಲ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಮತಾಂತರಗೊಂಡವರು. ಇದೆಲ್ಲವನ್ನೂ ತನ್ವೀರ್ ಸೇಠ್ ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಕುಟುಕಿದರು.

ಇದನ್ನೂ ಓದಿ: ಈ ದೇಶ ನಿಮ್ಮ ತಾತನದ್ದಾ?.. ಸಂಸದ ಪ್ರತಾಪ ಸಿಂಹಗೆ ಕಾಂಗ್ರೆಸ್‌ ಶಾಸಕ ತನ್ವೀರ್ ಸೇಠ್ ಪ್ರಶ್ನೆ

ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಆದೇಶಕ್ಕೆ ಪ್ರತಿಕ್ರಿಯೆ ನೀಡಿ, ಸರ್ಕಾರಕ್ಕೆ, ಶಿಕ್ಷಣ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರದ ಆದೇಶವನ್ನು ಎಲ್ಲ ವಿದ್ಯಾರ್ಥಿಗಳು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಲತಾ ಮಂಗೇಶ್ಕರ್​ ನಿಧನಕ್ಕೆ ಸಂತಾಪ : ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಪ್ರತಾಪ್ ಸಿಂಹ ಸಂತಾಪ‌ ಸೂಚಿಸಿದರು. ಲತಾ ಮಂಗೇಶ್ಕರ್ 92 ವರ್ಷಗಳ ಕಾಲ ತುಂಬು ಜೀವನ ನಡೆಸಿ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆ ಇಡೀ ದೇಶಕ್ಕೆ ನೋವು ತಂದಿದೆ. ದೇಶದ ಎಲ್ಲಾ ಭಾಗದಲ್ಲೂ ಲತಾ ಮಂಗೇಶ್ಕರ್ ಅಭಿಮಾನಿಗಳು ಇದ್ದಾರೆ. ಅವರ ಅಗಲಿಕೆ ಸಾಕಷ್ಟು ಅಭಿಮಾನಿ ಬಳಗಕ್ಕೆ ನೋವು ತಂದಿದೆ ಎಂದರು.

Last Updated : Feb 6, 2022, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.