ETV Bharat / city

ರಮೇಶ್ ಕುಮಾರ್ ಎಂತಹ ಮನುಷ್ಯ ಎಂಬುವುದು ಸಾಬೀತಾಗಿದೆ : ಹೆಚ್. ವಿಶ್ವನಾಥ್

ಅವರ ಎಲ್ಲಾ ಕಥೆಗಳು ಎಲ್ಲರಿಗೂ ಗೊತ್ತು. ನಾನು ಆ ಕಥೆ ಹೇಳಿದರೆ, ನನ್ನನ್ನು ಹುಚ್ಚ ಅಂತಾ ಹೇಳುತ್ತಾರೆ. ಅವರ ಸಭ್ಯಸ್ತಿಕೆ ನಿನ್ನೆ ಸದನದಲ್ಲಿ ಗೊತ್ತಾಗಿದೆ..

author img

By

Published : Dec 17, 2021, 1:09 PM IST

Updated : Dec 17, 2021, 1:27 PM IST

vishwanath reaction on ramesh kumar statement
ವಿಧಾನ ಪರಿಷತ್ ಸದಸ್ಯ ಹೆಚ್‌ ವಿಶ್ವನಾಥ್

ಮೈಸೂರು : ರಮೇಶ್ ಕುಮಾರ್ ಎಂತಹ ಮನುಷ್ಯ ಎಂಬುವುದು ರಾಜ್ಯದ ಜನರ ಮುಂದೆ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್‌. ವಿಶ್ವನಾಥ್ ಕುಟುಕಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ವಿಚಾರವಾಗಿ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಸ್ಪೀಕರ್ ಆಗಿದ್ದವರು.

ಮಾಜಿ ಸ್ಪೀಕರ್‌ ರಮೇಶ್​ ಕುಮಾರ್​ ವಿರುದ್ಧ ಎಂಎಲ್‌ಸಿ ಹೆಚ್‌ ವಿಶ್ವನಾಥ್ ಪ್ರತಿಕ್ರಿಯೆ ನೀಡಿರುವುದು..

ಯಾವ ವಿಚಾರ ಹೇಗೆ ಮಾತನಾಡಬೇಕೆಂದು ಅರಿಯಬೇಕಿತ್ತು. ತಾನೇ ಮಹಾನ್ ಬುದ್ಧಿವಂತ, ನಾನೇ ಪಂಡಿತ ಎಂದು ಬಿಂಬಿಸಿಕೊಳ್ಳುವ ರಮೇಶ್ ಕುಮಾರ್ ಈಗ ಎಂತಹ ಮನುಷ್ಯ ಎಂಬುದು ರಾಜ್ಯದ ಜನರ ಮುಂದೆ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು. ಅವರ ಎಲ್ಲಾ ಕಥೆಗಳು ಎಲ್ಲರಿಗೂ ಗೊತ್ತು. ನಾನು ಆ ಕಥೆ ಹೇಳಿದರೆ, ನನ್ನನ್ನು ಹುಚ್ಚ ಅಂತಾ ಹೇಳುತ್ತಾರೆ. ಅವರ ಸಭ್ಯಸ್ತಿಕೆ ನಿನ್ನೆ ಸದನದಲ್ಲಿ ಗೊತ್ತಾಗಿದೆ ಎಂದರು.

ಇದನ್ನೂ ಓದಿ: ರಮೇಶ್ ಕುಮಾರ್ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ, ಆಗ ಅವರ ಕಷ್ಟ ಗೊತ್ತಾಗುತ್ತೆ: ಸಚಿವ ಮುನಿರತ್ನ

ಮೈಸೂರು ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋತ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕೆಲ ಬಿಜೆಪಿ ನಾಯಕರೇ ಅಮಾಯಕ ರಘು ಅವರನ್ನು ಬಲಿ ಕೊಟ್ಟರು. ಬಿಜೆಪಿಯ ಅಭ್ಯರ್ಥಿ ಸೋಲಿಗೆ ಬಿಜೆಪಿಯ ಕೆಲ ನಾಯಕರೇ ಕಾರಣ ಎಂದರು‌. ಮೈಸೂರು ಭಾಗದಲ್ಲಿ ಬಿಜೆಪಿ‌ಯ ಕೆಲ ನಾಯಕರು ಜೆಡಿಎಸ್ ಏಜೆಂಟರ್‌ಗಳಾಗಿದ್ದಾರೆ.

ಜೆಡಿಎಸ್‌ ಏಜೆಂಟರ್​​ಗಳಾಗಿ ಬಿಜೆಪಿಗೆ ಒಳ ಏಟು ಹೊಡೆಯುತ್ತಿದ್ದಾರೆ. ಅಂತಹ ನಾಯಕರ ಹೆಸರುಗಳು ಆದಷ್ಟು ಬೇಗ ಹೊರಗೆ ಬರುತ್ತವೆ. ಇವರ ಒಳ ಏಟಿಗೆ ಬಿಜೆಪಿ ಅಭ್ಯರ್ಥಿ ಬಲಿಯಾದರು ಎಂದು ಹೇಳಿದರು. ಕೊಟ್ಟ ದುಡ್ಡು ಸಮರ್ಪಕವಾಗಿ ತಲುಪಲಿಲ್ಲ. ಕೆಲವರು ಜೆಡಿಎಸ್ ಪರವಾಗಿ ಕೆಲಸ ಮಾಡಿದರು ಎಂದು ತಿಳಿಸಿದರು.

Last Updated : Dec 17, 2021, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.