ಮೈಸೂರು: ಶಾಸಕ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಅವರ ಗನ್ ಮ್ಯಾನ್ನನ್ನು ಕರ್ತವ್ಯ ಲೋಪದ ಹಿನ್ನೆಲೆ ಅಮಾನತು ಮಾಡಲಾಗಿದೆ.
![Assault](https://etvbharatimages.akamaized.net/etvbharat/prod-images/kn-mys-03-gunman-suspend-vis-ka10003_19112019120243_1911f_1574145163_484.jpg)
ನ.17ರ ರಾತ್ರಿ ನಗರದ ಬನ್ನಿಮಂಪಟದ ಸಮೀಪವಿರುವ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ತನ್ವೀರ್ ಸೇಠ್ ಮೇಲೆ ಫರಾನ್ ಎಂಬ ಯುವಕ ಮಚ್ಚಿನಿಂದ ಹಲ್ಲೆ ಮಾಡಿದ್ದ. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ತನ್ವೀರ್ ಸೇಠ್ ಅವರ ಗನ್ ಮ್ಯಾನ್ ಸಿಎಆರ್ ಪೇದೆ ಪೈರೋಜ್ ಖಾನ್ನನ್ನು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅಮಾನತು ಮಾಡಿದ್ದಾರೆ.