ಮೈಸೂರು: ನೀವು ಚಾಮುಂಡೇಶ್ವರಿಗೆ, ಮಗನಿಗೆ ಕೆ.ಆರ್. ನಗರ ಕ್ಷೇತ್ರ ಕೇಳ್ತೀರಾ? ಏನು ನಿಮ್ಮದು ಮಹಾರಾಜರ ವಂಶನಾ? ಎಂದು ಶಾಸಕ ಜಿ.ಟಿ. ದೇವೇಗೌಡರ ವಿರುದ್ಧ ಶಾಸಕ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದರು.
ಭೇರ್ಯ ಗ್ರಾಮದಲ್ಲಿ ಏತ ನೀರಾವರಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದ್ದು ಹಾಗೂ ಸಾಲಿಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದಕ್ಕಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಕೆ.ಆರ್. ನಗರಕ್ಕೆ ಶಾಸಕ ಜಿ.ಟಿ ದೇವೇಗೌಡ ಮಗನಿಗೆ ಟಿಕೆಟ್ ಕೇಳಿರುವ ವಿಚಾರವಾಗಿ ವೇದಿಕೆಯಲ್ಲಿ ಮಾತನಾಡಿದ ಅವರು, ನಾನೇನು ಸತ್ತು ಹೋಗಿದ್ದೀನಾ? ಮೂರು ಸಲ ಸತತವಾಗಿ ಇಲ್ಲಿ ನಾನು ಗೆದ್ದಿದ್ದೇನೆ, ನಿಮಗೆ ಹೃದಯ ಇಲ್ಲವಾ, ಮನಸಾಕ್ಷಿ ಇಲ್ಲವಾ? ಎಂದು ಪ್ರಶ್ನಿಸಿದರು.
ನಾನು ಉಪನ್ಯಾಸಕರ ಮಗ, ನನಗೆ ಕೆ.ಆರ್. ನಗರದಲ್ಲಿ ಮಾತ್ರ ಶಕ್ತಿ ಇದೆ. ಜಿ.ಟಿ. ದೇವೇಗೌಡರು ಎಲ್ಲಿ ನಿಂತರು ಗೆಲ್ಲುತ್ತಾರೆ. ವೈಯಕ್ತಿಕವಾಗಿ ನನಗೆ ಜಿ.ಟಿ ದೇವೇಗೌಡರ ನಾಯಕತ್ವ ಬೇಕು. ಆದರೆ ಪಕ್ಷ ಏನು ತೀರ್ಮಾನ ಮಾಡುತ್ತೆ ಗೊತ್ತಿಲ್ಲ ಎಂದರು.
ಆದರೆ, ಕಾಂಗ್ರೆಸ್ ಪಕ್ಷದಿಂದ ಕೆ.ಆರ್. ನಗರದಲ್ಲಿ ಜಿ.ಟಿ.ಡಿ ಮಗ ಬಂದರೆ ಜೆಡಿಎಸ್ ಕಾರ್ಯಕರ್ತರು ಸತ್ತಿಲ್ಲ, ನಮಗೂ ಸ್ವಾಭಿಮಾನ ಇದೆ. ನಮ್ಮ ನಾಯಕರು ಅಂತಾ ಗೌರವ ಕೊಡುತ್ತೇವೆ. ನಾವು ನಮ್ಮ ಕಾರ್ಯಕರ್ತರನ್ನು ನಿಮಗೆ ಒತ್ತೆಯಿಡುವ ಹೇಡಿಗಳಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮದರಸಾಗಳಲ್ಲಿ ರಾಜ್ಯ ಶಿಕ್ಷಣ ಪದ್ಧತಿ ಜಾರಿಗೆ ಕ್ರಮ: ಸಚಿವ ನಾಗೇಶ್