ETV Bharat / city

ಸಂಸದರ ಕ್ರೆಡಿಟ್ ವಾರ್​: ಪ್ರತಾಪ್​​ ಸಿಂಹರಿಗೆ ಸ್ವಪಕ್ಷೀಯ ಶಾಸಕರಿಂದಲೇ ಟಾಂಗ್ - ಪ್ರತಾಪ್​ ಸಿಂಹ ವಿರುದ್ಧ ಎಲ್ ನಾಗೇಂದ್ರ ಆಕ್ರೋಶ

ಶಾಸಕ ಎಲ್.ನಾಗೇಂದ್ರ ಸಂಸದ ಪ್ರತಾಪ್​ ಸಿಂಹ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

MLA L Nagendra
ಶಾಸಕ ಎಲ್.ನಾಗೇಂದ್ರ
author img

By

Published : Mar 10, 2022, 1:26 PM IST

ಮೈಸೂರು: ಸಂಸದರಾದ ಪ್ರತಾಪಸಿಂಹ ಹಾಗೂ ಸುಮಲತಾ ಅಂಬರೀಶ್ ನಡುವೆ ಕ್ರೆಡಿಟ್ ವಿಚಾರವಾಗಿ ಟಾಕ್ ವಾರ್ ನಡೆದ ಬೆನ್ನಲ್ಲೇ, ಸ್ವಪಕ್ಷೀಯ ಶಾಸಕ ಎಲ್.ನಾಗೇಂದ್ರ ಅವರು ಪ್ರತಾಪ್​ ಸಿಂಹ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ನಿಮ್ಮ ಮನೆಯ ಹಣ ತಂದು ಅಭಿವೃದ್ಧಿ ಮಾಡಿದ್ದರೆ, ಅದರ ಕ್ರೆಡಿಟ್ ನೀವೇ ತೆಗೆದುಕೊಳ್ಳಿ. ಸಾರ್ವಜನಿಕರ ಹಣಕ್ಕೆ ಕ್ರೆಡಿಟ್ ತೆಗೆದುಕೊಳ್ಳುವುದಲ್ಲ. ಕ್ರೆಡಿಟ್ ಸಲ್ಲಬೇಕಿರೋದು ಬಿಜೆಪಿಗೆ. ಪ್ರಧಾನಿ ಮೋದಿ ಅವರೇ ಕ್ರೆಡಿಟ್ ತೆಗೆದುಕೊಳ್ಳೋದಿಲ್ಲ. ಅವರು ಬಿಜೆಪಿಗೆ ಕ್ರೆಡಿಟ್ ಕೊಡುತ್ತಾರೆ ಎಂದು ಕುಟುಕಿದರು.

ಸದ್ಯದಲ್ಲೇ ದೇವರಾಜ ಅರಸ ಮಾರುಕಟ್ಟೆ ಹಾಗೂ ಲ್ಯಾನ್ಸ್ ಸ್ಟೋನ್ ಬಿಲ್ಡಿಂಗ್​ಗೆ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಲಿದ್ದಾರೆ. ಅದನ್ನೂ ಕೂಡ ನಾನು ತಂದೆ ಎನ್ನದಿದ್ದರೆ ಸಾಕು ಎಂದು ವ್ಯಂಗ್ಯವಾಡಿದರು.

ಶಾಸಕ ಎಲ್.ನಾಗೇಂದ್ರ

ನಾನು ಸ್ಥಳೀಯ ಶಾಸಕ‌, ನನ್ನ ಅಧ್ಯಕ್ಷತೆಯಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಬೇಕು. ನನ್ನ ಅನುಪಸ್ಥಿತಿಯಲ್ಲಿ ಕೆ.ಆರ್. ಆಸ್ಪತ್ರೆ ವಿಚಾರವಾಗಿ ಮೀಟಿಂಗ್ ಮಾಡಿದರೆ ಅದಕ್ಕೆ ಬೆಲೆ ಇಲ್ಲ. ಅವರು ಮೀಟಿಂಗ್ ಮಾಡಲಿ, ಆದರೆ, ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ನನಗೆ ಬೇಸರ ತಂದಿದೆ. ಹಣ ಬಿಡುಗಡೆಗೆ ಅನುಮೋದನೆ ಸಿಕ್ಕಿಲ್ಲ. ಈಗಲೇ‌ ಮೀಟಿಂಗ್ ಮಾಡಿದರೆ ಅರ್ಥ ಏನು?. ಶತಮಾನೋತ್ಸಕ್ಕೆ ಇನ್ನೂ ಎರಡು ವರ್ಷಗಳು ಇದೆ. ಈಗಲೇ ಚರ್ಚೆ ಮಾಡಿದರೆ ಪ್ರಯೋಜನ ಇಲ್ಲ ‌ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಾಪ್ ಸಿಂಹ ಇನ್ನೂ 1,00,200 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರದಿಂದ ತಂದು ಅಭಿವೃದ್ಧಿ ಮಾಡಲಿ, ನನಗೂ ಸಂತೋಷ. ಆದರೆ ಏನಾದರು ಸಮಸ್ಯೆ ಆದಾಗ ಸ್ಥಳೀಯ ಶಾಸಕರನ್ನೇ ಕೇಳೋದು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿ ಕಾರಿದರು. ಜೊತೆಗೆ ಬೇರೆ ಕಡೆಯಲ್ಲೂ ಸಮಸ್ಯೆ ಇದೆ. ಅಲ್ಲಿಗೂ ಅನುದಾನ ಕೊಡಿಸಿ ಎಂದರು.

ಇದನ್ನೂ ಓದಿ: ಜನರ ಸಮಸ್ಯೆ ಪರಿಹರಿಸುವುದು ನಮ್ಮ ಜವಾಬ್ದಾರಿ ಇದರಲ್ಲಿ ಕ್ರೆಡಿಟ್ ಪ್ರಶ್ನೆ ಬರಲ್ಲ: ಸಂಸದ ಪ್ರತಾಪ್​ ಸಿಂಹ​

ನಾನು ಶಾಸಕನಾಗಿದ್ದೀನಿ, ನಾನು ಅನುದಾನ ತರುತ್ತೇನೆ. ನನ್ನ ಕ್ಷೇತ್ರಕ್ಕೆ 150 ಕೋಟಿ ಅನುದಾನ ತಂದಿದ್ದೇನೆ. ಆದರೆ, ಸರ್ಕಾರದ ಹಣಕ್ಕೆ ನಾವು ಕ್ರೆಡಿಟ್ ತಗೆದುಕೊಳ್ಳುವುದಲ್ಲ. ಒಟ್ಟಾರೆ ಬಿಜೆಪಿಗೆ ಆ ಕ್ರೆಡಿಟ್ ಸಲ್ಲಬೇಕು ಎಂದು ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.