ಮೈಸೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ, ಇಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ದೊಡ್ಡ ಕನ್ಯಾ ಗ್ರಾಮದ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಗ್ರಾಮದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಲ ಕಾರಣವೇನೆಂದು ಆಶಾ ಕಾರ್ಯಕರ್ತೆಯರಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಶಾ ಕಾರ್ಯಕರ್ತೆಯರು, ಕಳೆದ ವರ್ಷ ಒಂದು ಪ್ರಕರಣ ಕಂಡು ಬಂದರೆ ಗ್ರಾಮದ ಜನರೇ ಭಯಪಡುತ್ತಿದ್ದರು.
ಆದರೆ, ಇದೀಗ ದಿನಕ್ಕೆ 22ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟರೂ ಜನರು ಮಾತು ಕೇಳುತ್ತಿಲ್ಲ. ಜಾಗೃತಿ ಮೂಡಿಸಲು ಹೋದರೆ ನಮಗೆ ಕೆಟ್ಟದಾಗಿ ಮಾತನಾಡುತ್ತಾರೆ.
ಹಳ್ಳಿಯಲ್ಲಿ ಟೀ ಅಂಗಡಿಗಳು ಯಾವಾಗಲೂ ತೆರೆದಿರುತ್ತವೆ. ಪೊಲೀಸರು ಸರಿಯಾಗಿ ಬರುವುದಿಲ್ಲ. ಸೋಂಕಿನ ಬಗ್ಗೆ ಜನರಿಗೆ ತಾತ್ಸಾರ ಇದೆ. ಇದರಿಂದ ಹಳ್ಳಿಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗಿವೆ ಎಂದು ವಿವರಿಸಿದರು.
ಓದಿ: ಹೊನ್ನನಾಯಕನಹಳ್ಳಿ ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರಿಂದ ಪ್ರತಿಭಟನೆ