ಮೈಸೂರು: ನಾಡಗೀತೆಯನ್ನು ರಾಜ್ಯಾದ್ಯಂತ ಒಂದೇ ರಾಗದಲ್ಲಿ ಹಾಡುವಂತೆ ಮಾಡಲು ಹಾಗೂ ಹಾಡುವ ಸಮಯವನ್ನು ಏಕರೂಪಕ್ಕೆ ತರಲು ಚಿಂತಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಖಾತೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಗೀತೆಯನ್ನು ಮೊಟಕು ಮಾಡಬೇಕು ಎಂಬ ಉದ್ದೇಶವಿಲ್ಲ, ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಹಾಡುವ ಸಮಯವೂ ಕೂಡಾ ಹೆಚ್ಚು ಕಡಿಮೆ ಇರುತ್ತದೆ. ಇದನ್ನು ಏಕರೂಪ ಮಾಡುವ ಉದ್ದೇಶ ಇದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಇದರ ಜೊತೆಗೆ ವಿದ್ಯುತ್ ದರವನ್ನು ಸರ್ಕಾರ ಏರಿಸುವುದಿಲ್ಲ. ದರ ಏರಿಸುವುದು ವಿದ್ಯುತ್ ಕಂಪನಿಗಳ ಕೈಯಲ್ಲಿ ಇವೆ. ಸದ್ಯಕ್ಕೆ ವಿದ್ಯುತ್ ದರ ಏರಿಕೆಯಾಗಲ್ಲ ಎಂದು ಸುನಿಲ್ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು: ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ Gangrape