ಮೈಸೂರು : ಜಯಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಗೆ ಸಂಗ್ರಹಿಸಿದ 1 ಕೋಟಿ 5 ಲಕ್ಷ ರೂ. ದೇಣಿಗೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಹಸ್ತಾಂತರಿಸಿದರು.
ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಮೈಸೂರು ಮೃಗಾಲಯಕ್ಕೆ ಸಚಿವ ಎಸ್ ಟಿ ಸೋಮಶೇಖರ್ 21 ಲಕ್ಷದ 14 ಸಾವಿರ ರೂ. ಚೆಕ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಬೆಂಗಳೂರಿನ ಕೆಆರ್‌ಪುರಂ ವಿಧಾನಸಭಾ ಕ್ಷೇತ್ರದ ದಾನಿಗಳಿಂದ ದೇಣಿಗೆ ಪಡೆದ 84 ಲಕ್ಷ ರೂ.ಚೆಕ್‌ನ ಹಸ್ತಾಂತರಿಸಿದರು. ಇಬ್ಬರು ಸಚಿವರು ಸೇರಿ ಗುರುವಾರ ಒಂದೇ ದಿನ ಮೃಗಾಲಯಕ್ಕೆ ಒಟ್ಟಾರೆ 1,05,14,000 ರೂ. ದೇಣಿಗೆ ಹರಿದು ಬಂದಿದೆ.
ಉಸ್ತುವಾರಿ ಸಚಿವ ಸೋಮಶೇಖರ್ ಅವರು ಈವರೆಗೆ ತಮ್ಮ ಕ್ಷೇತ್ರ ಹಾಗೂ ಇತರ ಸಚಿವರಿಂದ ಮೃಗಾಲಯಕ್ಕೆ ಒಟ್ಟಾರೆಯಾಗಿ 2 ಕೋಟಿ 32 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದಾರೆ.