ಮೈಸೂರು: ಜಾನಪದ ಹಾಗೂ ವಿವಿಧ ಕಲಾತಂಡಗಳೊಂದಿಗೆ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್ ಹಾಗೂ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ದಸರಾ ಕೆಲಸಗಳ ಒತ್ತಡದ ನಡುವೆ ಕಲಾವಿದರೊಂದಿಗೆ ನೃತ್ಯ ಮಾಡಿ ಗಮನ ಸೆಳೆದರು.
ಅರಮನೆ ಆವರಣದಲ್ಲಿ ನಡೆಯುವ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಅಂತಿಮ ಸಿದ್ಧತೆಯನ್ನು ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಸ್.ಎ. ರಾಮದಾಸ್, ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಪರಿಶೀಲಿಸಿದರು. ಬಳಿಕ ಕಂಸಾಳೆ, ನಗಾರಿ, ವೀರಗಾಸೆ, ಗೊಂಬೆ ನೃತ್ಯ, ಚಂಡೆ ಮದ್ದಳೆ, ತಮಟೆ ಹಾಗೂ ಇತರೆ ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿದರು.
ಸೋಮನ ಕುಣಿತ ಕಲಾವಿದರಿಗೆ 2,000 ರೂ. ನೀಡಿದ ಸಚಿವ: ಇದೇ ವೇಳೆ, ಸೋಮನ ಕುಣಿತ ಕಲಾವಿದರ ಪೈಕಿ ಇಬ್ಬರಿಗೆ ಸಚಿವ ಸೋಮಶೇಖರ್ ತಲಾ ಒಂದು ಸಾವಿರ ರೂ. ನೀಡಿದರು.
ಇದನ್ನೂ ಓದಿ: ಜಗತ್ಪ್ರಸಿದ್ಧ ಜಂಬೂಸವಾರಿಗೆ ಕೆಲವೇ ಗಂಟೆಗಳು ಬಾಕಿ; ಗಜಪಡೆಗೆ ವಿಶೇಷ ಅಲಂಕಾರ