ETV Bharat / city

ಮರಕ್ಕೆ ಲಾರಿ ಡಿಕ್ಕಿ: ಚಾಲಕ, ಕ್ಲೀನರ್​​ ಪ್ರಾಣಾಪಾಯದಿಂದ ಪಾರು - ಚಾಲಕ, ಕ್ಲೀನರ್​​ ಪ್ರಾಣಾಪಾಯದಿಂದ ಪಾರು

ಲಾರಿಯೊಂದು ಭಾರಿ ಗಾತ್ರದ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಮೈಸೂರು ಜಿಲ್ಲೆಯ ಹೆಚ್​​ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.

Lorry collides with wood
ಮರಕ್ಕೆ ಡಿಕ್ಕಿ ಹೊಡೆದ ಲಾರಿ
author img

By

Published : Aug 5, 2021, 5:41 PM IST

ಮೈಸೂರು: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಭಾರಿ ಗಾತ್ರದ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಹೆಚ್​​ಡಿ ಕೋಟೆ ತಾಲೂಕಿನ ನಡೆದಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮರಕ್ಕೆ ಡಿಕ್ಕಿ ಹೊಡೆದ ಲಾರಿ

ಮೈಸೂರು ತಾಲೂಕಿನ ಜಯಪುರ ಗ್ರಾಮದ ಚಾಲಕ ಸತೀಶ್​ (25) ಮತ್ತು ಮೂರ್ತಿ (28) ಘಟನೆಯಲ್ಲಿ ಗಾಯಗೊಂಡವರು. ಕೇರಳದಿಂದ ಮೈಸೂರಿಗೆ ಆಗಮಿಸುತ್ತಿದ್ದ ವೇಳೆ ಹೆಚ್​​ಡಿ ಕೋಟೆ ತಾಲೂಕಿನ ಕೊಲ್ಲೇಗೌಡನಹಳ್ಳಿ ವೃತ್ತದ ಬಳಿ ವೇಗವಾಗಿ ಬಂದ ಲಾರಿ ಮರಕ್ಕೆ ಅಪ್ಪಳಿಸಿದೆ‌.

ಡಿಕ್ಕಿ ಹೊಡೆದ ರಭಸಕ್ಕೆ ಮರ ಬುಡಸಮೇತ ಲಾರಿ ಮೇಲೆ ಬಿದ್ದಿದೆ. ಭೀಕರ ಅಪಘಾತ ಸಂಭವಿಸಿದರೂ ಆಶ್ಚರ್ಯಕರ ರೀತಿಯಲ್ಲಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.

ಅತೀ ವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಹೆಚ್​​ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.