ETV Bharat / city

ಕೋವಿಡ್‌ ನಡುವೆ ನಾಯಕತ್ವ ಬದಲಾವಣೆ ಸೂಕ್ತವಲ್ಲ: ಶಾಸಕ ಸಾ.ರಾ.ಮಹೇಶ್ - ಯಡಿಯೂರಪ್ಪ ನಾಯಕತ್ವ ಬದಲಾವಣೆ

ಕೋವಿಡ್​ ಭೀತಿ ಇನ್ನೂ ಜನರಲ್ಲಿದೆ. ಈ ಸಂದರ್ಭದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಬಿಜೆಪಿ ಸರ್ಕಾರ ನಾಯಕತ್ವ ಬದಲಾವಣೆಗೆ ಮುಂದಾಗಿರುವುದು ಸಮಂಜಸವಲ್ಲ ಎಂದು ಶಾಸಕ ಸಾ.ರಾ.ಮಹೇಶ್​ ಹೇಳಿದರು.

Leadership change is not right at this time
ಶಾಸಕ ಸಾರಾ ಮಹೇಶ್
author img

By

Published : Jul 22, 2021, 4:07 PM IST

ಮೈಸೂರು: ಕೋವಿಡ್‌ ಎರಡನೇ ಅಲೆ ಇನ್ನೂ ಮುಗಿದಿಲ್ಲ, ಮೂರನೇ ಅಲೆ ಆರಂಭವಾಗುತ್ತಿದೆ. ಸರ್ಕಾರದ ಯೋಜನೆಗಳು ಸಾಕಷ್ಟಿವೆ. ಆದರೆ ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ನಾಯಕತ್ವ ಬದಲಾವಣೆ ಸೂಕ್ತವಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಅಭಿಪ್ರಾಯಪಟ್ಟರು.

ನಗರದ ರಮಾವಿಲಾಸ ರಸ್ತೆಯಲ್ಲಿರುವ ಕಾಂಗ್ರೆಸ್​ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾಮಾರಿ ಕೊರೊನಾ ನಡುವೆ ನಾಯಕತ್ವ ಬದಲಾವಣೆ ಸೂಕ್ತವಲ್ಲ ಎಂದು ಹೇಳುವ ಮೂಲಕ ಬಿಎಸ್​ವೈ ಪರ ಬ್ಯಾಟಿಂಗ್ ಮಾಡಿದರು.

ನಾಯಕತ್ವ ಬದಲಾವಣೆ ಸೂಕ್ತ ಸಮಯವಲ್ಲ- ಸಾ.ರಾ ಮಹೇಶ್

ನಾಯಕತ್ವ ಬದಲಾವಣೆ ಬಿಜೆಪಿ ಪಕ್ಷದವರಿಗೆ ಬಿಟ್ಟ ವಿಚಾರ. ಆದರೆ ನಾನೊಬ್ಬ ಜನಪ್ರತಿನಿಧಿಯಾಗಿ ಮಾತನಾಡುವುದಾದರೆ, ಇಂತಹ ಸಂದರ್ಭ ಸೂಕ್ತವಲ್ಲ. ಈಗಾಗಲೇ ರಾಜ್ಯದ ಜನರು ಕೊರೊನಾದಿಂದ ಸಂಕಷ್ಟದಲ್ಲಿದ್ದಾರೆ‌ ಎಂದು ಹೇಳಿದರು.

ಯಡಿಯೂರಪ್ಪನವರಿಗೆ ಮಠಾಧೀಶರ ಬೆಂಬಲ ವಿಚಾರವಾಗಿ ಮಾತನಾಡುತ್ತಾ, ಯಾರ ಅಧಿಕಾರಾವಧಿಯಲ್ಲಿ‌ ಮಠ-ಮಾನ್ಯಗಳಿಗೆ ಸಹಕಾರ ನೀಡುತ್ತಾರೋ ಅವರ ಬೆಂಬಲಕ್ಕೆ ಮಠಗಳು ನಿಲ್ಲುತ್ತವೆ. ಇದು ಹೊಸದೇನಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.