ETV Bharat / city

ಚಡ್ಡಿಯೊಳಗೆ ಏನೂ ಇಲ್ಲ, ಇಬ್ಬರ ಜಗಳದಲ್ಲಿ ಚಡ್ಡಿ ವ್ಯಾಪಾರ ಕುದುರಿದೆಯಷ್ಟೇ:  ಕುಮಾರಸ್ವಾಮಿ ವ್ಯಂಗ್ಯ

ಚಡ್ಡಿ ರೈತರ ಸಂಕೇತ, ರೈತರು ಚಡ್ಡಿ ಹಾಕಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಾರೆ. ಚಡ್ಡಿ ಚಡ್ಡಿ ಎಂದು ರೈತರಿಗೇಕೆ ಅವಮಾನ ಮಾಡುತ್ತೀರಿ ಎಂದು ಬಿಜೆಪಿ ಹಾಗೂ ಕಾಂಗ್ರೆಸ್​ನ ಚಡ್ಡಿ ಅಭಿಯಾನದ ವಿರುದ್ಧ ಹೆಚ್​.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.

H.D. Kumaraswamy talked in Pressmeet
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Jun 7, 2022, 2:40 PM IST

Updated : Jun 7, 2022, 2:50 PM IST

ಮೈಸೂರು : ಆರ್​ಎಸ್​ಎಸ್​​ ಕಾಂಗ್ರೆಸ್ ನಡುವಿನ ಚಡ್ಡಿ ಅಭಿಯಾನ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಡ್ಡಿ ಅಲ್ಲ ಅವರು ನಡೆಸುವ ಕಾರ್ಯಗಳನ್ನು ವಿರೋಧಿಸಬೇಕು. ಚಡ್ಡಿಯೊಳಗೆ ಏನೂ ಇಲ್ಲ, ಇಬ್ಬರ ಜಗಳದಲ್ಲಿ ಚಡ್ಡಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಚಡ್ಡಿಗೆ ಒಳ್ಳೆಯ ಬೇಡಿಕೆಯಾಗಿದೆ. ಚಡ್ಡಿ ಹೊಲಿಯುವ ಟೈಲಗೂ ಕೂಡ ಬೇಡಿಕೆ ಶುರುವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರ್​ಎಸ್​ಎಸ್​​​ ಕಾಂಗ್ರೆಸ್ ನಡುವಿನ ಚಡ್ಡಿ ಅಭಿಯಾನ ವಿಚಾರವನ್ನು ಪ್ರಸ್ತಾಪಿಸಿ, ಚಡ್ಡಿ ರೈತರ ಸಂಕೇತ, ರೈತರು ಚಡ್ಡಿ ಹಾಕಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಾರೆ. ಚಡ್ಡಿ ಚಡ್ಡಿ ಎಂದು ರೈತರಿಗೇಕೆ ಅವಮಾನ ಮಾಡುತ್ತೀರಿ. ಈ ಚಡ್ಡಿ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಹೇಳಿದರು.

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಲ್ಪಸಂಖ್ಯಾತರನ್ನೇ ಮೊದಲ ಅಭ್ಯರ್ಥಿ ಮಾಡಬೇಕಿತ್ತು: ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಅಷ್ಟೊಂದು ಗೌರವವಿದ್ದಿದ್ದರೆ, ಅಲ್ಪಸಂಖ್ಯಾತರನ್ನೇ ಮೊದಲ ಅಭ್ಯರ್ಥಿ ಮಾಡಬೇಕಿತ್ತು. ಮೂರನೆಯ ಬಾರಿಗೆ ಹಾಕಿರೋ ಮೊದಲನೇ ಅಭ್ಯರ್ಥಿ, ಕರ್ನಾಟಕಕ್ಕೆ ನೀಡಿರುವ ಕೊಡುಗೆ ಏನು ? ವೋಟು ಬರಲ್ಲ ಅಂತ ಎರಡನೇ ಅಭ್ಯರ್ಥಿಯನ್ನು ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾವು ಗೆದ್ದಿರೋದಕ್ಕಿಂತ ಸೋತಿದ್ದೇ ಹೆಚ್ಚು, ಅವರೇ ಗೆದ್ದಿರೋದು ಪಾಪ : ಸಿದ್ದರಾಮಯ್ಯ ಜೆಡಿಎಸ್ ಅಭ್ಯರ್ಥಿ ಕಣದಿಂದ ವಾಪಸ್ ಸರಿಸಿ ಕಾಂಗ್ರೆಸ್​ಗೆ ಬೆಂಬಲ ಕೊಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ನಾವು ಗೆದ್ದಿರೋ ದಕ್ಕಿಂತ ಸೋತಿದ್ದೆ ಹೆಚ್ಚು ಅವರ ಗೆದ್ದಿರೋದು ಪಾಪ ಎಂದಿದ್ದಾರೆ.

ಬಿಜೆಪಿ ಸೋಲಬೇಕು ಅನ್ನೋದು ಇದ್ದಿದ್ದರೆ ಚುನಾವಣಾ ಪೂರ್ವದಲ್ಲಿ ನಮ್ಮ ಜೊತೆ ಚರ್ಚೆ ಮಾಡಬೇಕಿತ್ತು. ನಮ್ಮ ಪಕ್ಷದ ಜೊತೆ ಬಾಂಧವ್ಯ ಹೊಂದಿರುವವರೊಟ್ಟಿಗೆ ಮಾತನಾಡಬೇಕಿತ್ತು. ಮೊದಲನೇ ಅಭ್ಯರ್ಥಿಗೆ ಮತ ಕೊಟ್ಟ ಬಳಿಕ ಅವರಿಗೆ 22 ಮತ ಉಳಿಯುತ್ತವೆ. ನಮ್ಮ ಬಳಿ 32 ಮತಗಳಿವೆ. ನಾನು ಕಾಂಗ್ರೆಸ್​ನ ಯಾವ ನಾಯಕರ ಜೊತೆಯೂ ಮಾತನಾಡಿಲ್ಲ. ದೇವೇಗೌಡರು ಸೋನಿಯಾ ಗಾಂಧಿ ಜೊತೆ ಮಾತನಾಡಿದ್ದರು. ಸುರ್ಜೆವಾಲಾ ಅವರು ಎರಡನೇ ಪ್ರಾಶಸ್ತ್ಯದ ಮತಗಳನ್ನು ಕೊಡಿ ಅಂತ ಫೋನ್ ಮಾಡಿ ಕೇಳಿದ್ರು. ನಮ್ಮ ಎರಡನೇ ಪ್ರಾಶಸ್ತ್ಯದ ಮತ ಪ್ರಯೋಜನಕ್ಕೆ ಬರುವುದಿಲ್ಲ ಹೀಗಾಗಿ ನಮ್ಮ ಎರಡನೇ ಮತ ನಿಮಗೆ ಹಾಕುತ್ತೇವೆ. ನಿಮ್ಮ ಎರಡನೇ ಮತ ನಮಗೆ ಹಾಕಿ ಅಂತ ಕೇಳಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಸಿಎಂ ಆದ ಒಂದೇ ತಿಂಗಳಿಗೆ ಸಾರ್ವಜನಿಕವಾಗಿ ಕಣ್ಣೀರು ಹಾಕಿದೆ: ನಾನು ಸಿಎಂ ಆದಾಗ ನನಗೆ ಸಿಎಂ ಸ್ಥಾನ ಬೇಡ ಎಂದಿದ್ದೆ, ನೀವೇ ಬಲವಂತವಾಗಿ ನಮಗೆ ಸಿಎಂ ಕುರ್ಚಿ ನೀಡಿದ್ರಿ, ನಾವೇನು ನಿಮ್ಮ ಮುಂದೆ ಬಂದು ಬೇಡಿರಲಿಲ್ಲ. ನಾನು ಸಿಎಂ ಆದ ಒಂದೇ ತಿಂಗಳಿಗೆ ಸಾರ್ವಜನಿಕವಾಗಿ ಕಣ್ಣೀರು ಹಾಕಿದೆ. ನಾನು ವಿಷಕಂಠನ ಪರಿಸ್ಥಿತಿಯಲ್ಲಿ ಇದ್ದೇನೆ ಎಂದು ನಾನು ಇವತ್ತು ಹೇಳುತ್ತಿಲ್ಲ, ನನಗೆ ರೈತರ ಸಾಲ ಮನ್ನಾ ಬದ್ಧತೆ ಇತ್ತು. ಆದರೆ, 2ನೇ ಬಜೆಟ್ ಮಾಡಲು ಅವಕಾಶವಿರಲಿಲ್ಲ, ಯಡಿಯೂರಪ್ಪ ಕ್ಯಾಸೆಟ್ ಬಿಡುಗಡೆ ಮಾಡಿದ್ದಕ್ಕೆ ಸರ್ಕಾರದ ಬಜೆಟ್ ಮಂಡಿಸಲು ಸಾಧ್ಯವಾಯಿತು ಎಂದರು.

ನನ್ನ ಮೇಲೆ ಸಿದ್ದರಾಮಯ್ಯ ವಿಷ ಕಾರುತ್ತಿದ್ದರು. ಆದರೂ ರೈತರ ಸಾಲ ಮನ್ನಾಕ್ಕಾಗಿ ಆ ಕಷ್ಟ ಸಹಿಸಿಕೊಂಡಿದ್ದೆ. ಅವತ್ತು ಸಹ ಬಿಜೆಪಿಯ ಕೆಲವರು ಸರ್ಕಾರ ಉಳಿಸಲು ಬಂದಿದ್ದರು. ನಾನೇ ಬೇಡ ಅಂತ ಅವರನ್ನು ಹಿಂದಕ್ಕೆ ಕಳುಹಿಸಿದ್ದೆ. ನಿಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ ಆಮೇಲೆ ಆತ್ಮಸಾಕ್ಷಿಯ ಮತಗಳನ್ನು ಕೇಳಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಎಲ್ಲ ಕಲ್ಮಶ ತೊರೆದು ಹೊರಬನ್ನಿ ನಾನು ಕಾಂಗ್ರೆಸ್ ಜೊತೆ ಕೈ ಜೋಡಿಸುತ್ತೇನೆ: ಸಿದ್ದರಾಮಯ್ಯ ಯಡಿಯೂರಪ್ಪ ಫೋಟೋವನ್ನು ಏಕೆ ಬಿಡುಗಡೆ ಮಾಡಿದ್ದೀರಿ, ಆತ್ಮಸಾಕ್ಷಿಯ ಮತ ಪಡೆಯಲು ಫೋಟೋವನ್ನು ಮಾರುಕಟ್ಟೆಗೆ ಬಿಟ್ಟಿದ್ದೀರಾ? ಅಷ್ಟಕ್ಕೂ ಆತ್ಮಸಾಕ್ಷಿಯ ಮತ ಎಂದರೇನು? ದುಡ್ಡಿಗೆ ಖರೀದಿ ಮಾಡುವುದಾ ಅಥವಾ ಪಕ್ಷಾಂತರ ಮಾಡಿಸುವುದಾ, ನಮ್ಮನ್ನ ಕೆಣಕಿ ಏಕೆ ಮುಖಕ್ಕೆ ಮಂಗಳಾರತಿ ಮಾಡಿಕೊಳ್ಳುತ್ತೀರಾ?, ನಮ್ಮ ಪಕ್ಷವನ್ನು ನೀವು ಉಳಿಸುವುದು ಬೇಡ. ಸಿಎಂ ಮಾಡಿದ್ದಕ್ಕೆ 70ಕ್ಕೆ ತಂದು ನಿಲ್ಲಿಸಿದ್ದೀರಾ, ಮುಂದಿನ ಚುನಾವಣೆಯಲ್ಲಾದರೂ ಪಕ್ಷದ ಋಣ ತೀರಿಸಿ ನಿಮ್ಮ ಬುರುಡೆ ಭಾಷಣ ನಿಲ್ಲಿಸಿ. ಎಲ್ಲ ಕಲ್ಮಶವನ್ನು ತೊರೆದು ಹೊರಬನ್ನಿ ನಾನು ಕಾಂಗ್ರೆಸ್ ಜೊತೆ ಕೈ ಜೋಡಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿದರು.

ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ ಕಾಂಗ್ರೆಸ್ ಪಾತ್ರ ಇಲ್ಲ: ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ನೀವು ಎಲ್ಲಿದ್ರಿ, ಸಿಎಂ ಕುರ್ಚಿ ಬಗ್ಗೆ ಚಿಂತೆ ಮಾಡುತ್ತಿದ್ದ ಗಿರಾಕಿ ನೀವು. ದೇವೇಗೌಡರು ಪ್ರಧಾನಿಯಾಗುವುದಕ್ಕೆ ಕಾಂಗ್ರೆಸ್​ನ ಪಾತ್ರ ಏನೂ ಇಲ್ಲ. ಯುನೈಟೆಡ್​ನಲ್ಲಿದ್ದ ಪಕ್ಷಗಳು ಆ ಸಮಯದಲ್ಲಿ ಕಾಂಗ್ರೆಸ್​ ಅನ್ನು ತಿರಸ್ಕಾರ ಮಾಡಿದ್ದವು ಎಂದಿದ್ದಾರೆ ಎಂದು ಸಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯರ ಆತ್ಮಸಾಕ್ಷಿ ಮತಗಳ ಹೇಳಿಕೆ ಪ್ರತಿಕ್ರಿಯೆಗೆ ಯೋಗ್ಯವಲ್ಲ: ಸಿಎಂ

Last Updated : Jun 7, 2022, 2:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.