ಮೈಸೂರು: ಮುಖ್ಯಮಂತ್ರಿಯನ್ನಂತೂ ಮಾಡಲಿಲ್ಲ, ಹಿರಿತನವನ್ನು ಪರಿಗಣಿಸಿ ಉಪಮುಖ್ಯಮಂತ್ರಿಯನ್ನಾದರೂ ಮಾಡಲಿ ಎಂಬುದು ಬೆಂಬಲಿಗರ ಅಭಿಪ್ರಾಯ. ಕೇಂದ್ರದ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡಿ ತಾಯಿಯ ವರ್ಧಂತಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಯಾವ ತೀರ್ಮಾನವನ್ನು ಕೈಗೊಳ್ಳುತ್ತದೋ ಅದಕ್ಕೆ ನಾನು ಬದ್ಧನಾಗಿದ್ದೇನೆ.
ಮುಖ್ಯಮಂತ್ರಿಯನ್ನಂತೂ ಮಾಡಲಿಲ್ಲ, ಹಿರಿತನವನ್ನು ಪರಿಗಣಿಸಿ ಉಪಮುಖ್ಯಮಂತ್ರಿಯನ್ನಾದರೂ ಮಾಡಲಿ ಎಂಬ ನಿರೀಕ್ಷೆ ಬೆಂಬಲಿಗರದ್ದು. ಪಕ್ಷ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದೆ. ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿಯನ್ನಾದರೂ ಮಾಡಲಿ ಎಂಬುದು ಪಕ್ಷದ ಹಿರಿಯರು, ಸ್ವಾಮೀಜಿಗಳು ಅಭಿಪ್ರಾಯ ಎಂದರು.
ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಜನ ನಮಗೆ ಸ್ಪಷ್ಟಬಹುಮತ ಕೊಟ್ಟಿಲ್ಲ. ಆದರೆ, ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಇದ್ದರಿಂದ ಪಕ್ಷದಲ್ಲಿ ಗೊಂದಲಗಳು ಇರುವುದು ನಿಜ. ಈ ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಲಿದೆ. ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುವುದು ಹೈಕಮಾಂಡ್ಗೆ ಗೊತ್ತಿದೆ. ನಮ್ಮ ಗೊಂದಲಗಳು ಬಗೆಹರಿದಿದೆ.
ಈಗ ಕಾಂಗ್ರೆಸ್ನಲ್ಲಿ ಗೊಂದಲಗಳು ಶುರುವಾಗಿದೆ. ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎ.ಬಿ.ಪಾಟೀಲ್ ಹಾಗೂ ತನ್ವೀರ್ ಸೇಠ್ ಹೇಳಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಯಾರು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.
ಇದನ್ನೂ ಓದಿ: ಪ್ರವಾಹಕ್ಕೆ ಐತಿಹಾಸಿಕ ಕೂಡಲಸಂಗಮ ದೇಗುಲ ಜಲಾವೃತ