ETV Bharat / city

ಪ್ರತಾಪ್ ಸಿಂಹ ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರೆಯೇ?: ಆರ್. ಧ್ರುವನಾರಾಯಣ್ ಪ್ರಶ್ನೆ

author img

By

Published : Sep 18, 2021, 4:07 PM IST

ಸಿದ್ದರಾಮಯ್ಯ ಧರ್ಮಾಧಾರಿತ ರಾಜಕೀಯ ಮಾಡಿಲ್ಲ. ಸಿದ್ದರಾಮಯ್ಯ ಅವರ ಕಾಲದಲ್ಲಿ ದೇವಾಲಯ ನೆಲಸಮ ಮಾಡುವ ಕೆಲಸ ಮಾಡಿಲ್ಲ‌. ಆ ರೀತಿ ನಿದರ್ಶನ ಇದ್ದರೆ ಹೇಳಲಿ. ಹಿಂದೂ ಧರ್ಮ ಬಿಜೆಪಿಯವರ ಸ್ವತ್ತಲ್ಲ. ಎಲ್ಲರಿಗೂ ಸೇರಿದ್ದಾಗಿದೆ. ಧರ್ಮಾಧಾರಿತ ರಾಜಕೀಯ ಮಾಡುವುದು ಬಿಟ್ಟು, ಜಾತ್ಯಾತೀತ ರಾಜಕಾರಣ ಮಾಡುವುದು ಕಲಿಯಿರಿ..

KPCC Working President R Dhruvanarayan
‌ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್

ಮೈಸೂರು : ದೇವಾಲಯ ತೆರವುಗೊಳಿಸಲು ಸರ್ಕಾರವೇ ಆದೇಶ ನೀಡಿ, ಈಗ ಆರೋಪವನ್ನು ಅಧಿಕಾರಗಳ ಮೇಲೆ ಹಾಕುತ್ತಿದೆ. ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸಂಸದ ಪ್ರತಾಪ್ ಸಿಂಹ ಅನವಶ್ಯಕವಾಗಿ ಲಘುವಾಗಿ ಮಾತನಾಡುತ್ತಿದ್ದು, ಪ್ರತಾಪ್ ಸಿಂಹ ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದಿದ್ದಾರೆಯೇ ಎಂದು ‌ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಪ್ರಶ್ನಿಸಿದ್ದಾರೆ.

‌ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ವಾಗ್ದಾಳಿ ನಡೆಸಿರುವುದು..

ಇಂದು ನಗರದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಮಾಡುವ ಆದೇಶವನ್ನು ಪಾಲನೆ ಮಾಡಲು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಅನುಮತಿ ತೆಗೆದುಕೊಂಡು ಆದೇಶ ಹೊರಡಿಸಲಾಗುತ್ತದೆ.

ಮುಖ್ಯ ಕಾರ್ಯದರ್ಶಿಗಳ ಆದೇಶದ ಮೇರೆಗೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ.‌ ಸರ್ಕಾರ ಲೋಪವೆಸಗಿ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ, ಆದೇಶ ನೀಡುವ ಮೊದಲೇ ಸಾಧಕ-ಬಾಧಕಗಳನ್ನು ಚರ್ಚೆ ಮಾಡಬೇಕಿತ್ತು ಎಂದರು.

ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ ಅವರು, ಬಾಲಿಶವಾದ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ವಿಷಯ ಪ್ರಸ್ತಾಪ ಅನವಶ್ಯಕ. ಸಿದ್ದರಾಮಯ್ಯ ದೇವಾಲಯ ಒಡೆದದ್ದು ತಪ್ಪು ಎಂದು ಹೇಳಿದ್ದಾರೆ. ಆದರೆ, ಪ್ರತಾಪ್‌ ಸಿಂಹ ಹಿಂದೂ ಧರ್ಮವನ್ನು ಗುತ್ತಿಗೆ ತೆಗೆದುಕೊಂಡಿದ್ದೇವೆ ಎಂಬಂತೆ ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದನ್ನು ಖಂಡಿಸುತ್ತೇವೆ.‌

ಸಿದ್ದರಾಮಯ್ಯ ಧರ್ಮಾಧಾರಿತ ರಾಜಕೀಯ ಮಾಡಿಲ್ಲ. ಸಿದ್ದರಾಮಯ್ಯ ಅವರ ಕಾಲದಲ್ಲಿ ದೇವಾಲಯ ನೆಲಸಮ ಮಾಡುವ ಕೆಲಸ ಮಾಡಿಲ್ಲ‌. ಆ ರೀತಿ ನಿದರ್ಶನ ಇದ್ದರೆ ಹೇಳಲಿ. ಹಿಂದೂ ಧರ್ಮ ಬಿಜೆಪಿಯವರ ಸ್ವತ್ತಲ್ಲ. ಎಲ್ಲರಿಗೂ ಸೇರಿದ್ದಾಗಿದೆ. ಧರ್ಮಾಧಾರಿತ ರಾಜಕೀಯ ಮಾಡುವುದು ಬಿಟ್ಟು, ಜಾತ್ಯಾತೀತ ರಾಜಕಾರಣ ಮಾಡುವುದು ಕಲಿಯಿರಿ ಎಂದು ಸಲಹೆ ನೀಡಿದರು.

ಆತುರದಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ರಾಜ್ಯಕ್ಕೆ ಮಾರಕ : ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದು ರಾಜ್ಯಕ್ಕೆ ಮಾರಕವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಕಳವಳ ವ್ಯಕ್ತಪಡಿಸಿದರು. ಪ್ರಾಚೀನತೆಯತ್ತ ಮುಖ ಮಾಡುತ್ತಿರುವ ಹಾಗೂ ಹಿಮ್ಮುಖ ಚಲನೆ ರಾಷ್ಟ್ರೀಯ ನೀತಿಯಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ರಾಜ್ಯಕ್ಕೆ ಮಾರಕ ಅಂತಾರೆ ಆರ್.ಧ್ರುವನಾರಾಯಣ್..

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 1968ರಲ್ಲಿ ಇಂದಿರಾಗಾಂಧಿ ಹಾಗೂ 1986 ರಾಜೀವ್ ಗಾಂಧಿಯವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದಾರೆ. ಜಾರಿಗೊಳಿಸಿದ ಸಂದರ್ಭದಲ್ಲಿ ಸದನದಲ್ಲಿ, ಲೋಕಸಭೆ, ರಾಜ್ಯಸಭೆಯಲ್ಲಿ, ವಿಧಾನಸಭೆ, ರಾಜ್ಯಸಭೆಗಳಲ್ಲಿ ವ್ಯಾಪಕವಾದ‌ ಚರ್ಚೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮರಸ್ಯದಿಂದ‌ ಅಂದಿನ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ‌ಗೊಳಿಸಿದ್ದಾರೆ.

ಆದರೆ, ಇಂದು ರಾಷ್ಟ್ರೀಯ ಶಿಕ್ಷಣ ‌ನೀತಿ ಬಗ್ಗೆ ಪಾರ್ಲಿಮೆಂಟ್, ಸದನದಲ್ಲಿ ಕೂಡ ಚರ್ಚೆಯಾಗಿಲ್ಲ. ಅಲ್ಲದೇ ಇದನ್ನು ಕೂಡಲೇ ಜಾರಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಬಹಳಷ್ಟು ಹಿನ್ನಡೆ ಉಂಟಾಗುತ್ತದೆ.

ವಿಶೇಷವಾಗಿ ಸಂವಿಧಾನದ ಪರಿಚ್ಛೇದ 7ರಲ್ಲಿ ಶಿಕ್ಷಣದ ಕಾನೂನುಗಳನ್ನು ರೂಪಿಸುವಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಚರ್ಚಿಸಿ ಒಮ್ಮತದ ಮೇರೆಗೆ ನೀತಿ ರೂಪಿಸಬೇಕಾಗುತ್ತದೆ. ಆದರೆ, ಸದನದಲ್ಲಿ ಚರ್ಚೆಯಾಗದೆ ದೇಶದಲ್ಲಿ ಪ್ರಪ್ರಥಮವಾಗಿ ರಾಜ್ಯದಲ್ಲಿ ಜಾರಿಗೆ ತರಬೇಕೆಂಬ ಉದ್ದೇಶ ಇಟ್ಟುಕೊಂಡು ಜಾರಿಗೆ ತರುವ ಪ್ರಯತ್ನ ಈಗಾಗಲೇ ಮಾಡುತ್ತಿದ್ದಾರೆ. ‌

ಹೊಸ ಶಿಕ್ಷಣ ನೀತಿಯಲ್ಲಿ ‌ಸಂವಿಧಾನ ಮತ್ತು ಸರ್ಕಾರದ ‌ಆದ್ಯ ಕರ್ತವ್ಯಗಳನ್ನು ಸಾಧಿಸುವ ಬಗ್ಗೆ ಸ್ಪಷ್ಟ ಉಲ್ಲೇಖಗಳಿಲ್ಲ. ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಂಡು ಶಿಕ್ಷಣ ನೀತಿ ರೂಪಿಸಬೇಕಾಗಿತ್ತು. ಕೇಂದ್ರ ಸರ್ಕಾರದ ಬಜೆಟ್​​ನಲ್ಲಿ ನಮ್ಮ ಜಿಡಿಪಿ ಶೇ.6ರಷ್ಟು ಹಣವನ್ನು ರಾಷ್ಟ್ರೀಯ ಶಿಕ್ಷಣ ನೀತಿಗೆ ಇಡಬೇಕಾಗಿತ್ತು.

ಆ ಪ್ರಯತ್ನಗಳನ್ನು ಮಾಡಬೇಕಾಗಿತ್ತು. ಹಾಗಾಗಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶಿಕ್ಷಕರ‌ ಸಮಸ್ಯೆ, ಬಹಳಷ್ಟು ಕಡೆ ಶಿಕ್ಷಕರ ಹುದ್ದೆ ಖಾಲಿ ಇದೆ. ಮೊದಲು ಶಾಲೆಗಳ ಅಭಿವೃದ್ಧಿ ಬಗ್ಗೆ ಸರ್ಕಾರ ಆದ್ಯತೆ ನೀಡಬೇಕು ಎಂದರು.

ಕಲ್ಪನೆ ಆಧಾರಿತ ರಾಷ್ಟ್ರೀಯ ಶಿಕ್ಷಣ ನೀತಿ : ರಾಷ್ಟ್ರೀಯ ಶಿಕ್ಷಣ ನೀತಿ ಅವತರಣಿಕೆಯ 11(1)ರಲ್ಲಿನ ಹೇಳಿಕೆಯಂತೆ ಬಾಣಬಟ್ಟ ಕವಿಯ ಕಾದಂಬರಿಯಲ್ಲಿ 64 ವಿದ್ಯೆಗಳನ್ನು ಕಲಿಸಬೇಕೆಂದು ಬರೆಯಲಾಗಿದೆ. ಕಾದಂಬರಿ ಕಲ್ಪನೆಯ ಆಧಾರದ ಮೇಲೆ ರಚನೆಯಾಗಿದ್ದು, ಇದರ ಆಧಾರದ‌ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಯತ್ನಿಸುತ್ತಿದ್ದಾರೆ. ಇದು ಹಿಮ್ಮುಖ ಚಲನೆಯಾಗಿದೆ. ವೈಜ್ಞಾನಿಕ ತಳಹದಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ರೂಪುಗೊಳ್ಳಬೇಕೆ ವಿನಃ ಪುರಾಣ, ಕಾದಂಬರಿ ಆಧಾರಿತ, ಕಲ್ಪನೆ ಆಧಾರದ ಮೇಲಿ ರೂಪಿಸಲು ಸಾಧ್ಯವಾಗುವುದಿಲ್ಲ ಎಂದರು.

ಸದರಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಚಿತ, ಗುಣಮಟ್ಟದ ಶಿಕ್ಷಣದ ಬಗ್ಗೆ ಯಾವುದೇ ಪ್ರಸ್ತಾವನೆಗಳಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ವಿದ್ಯಾರ್ಥಿಗಳ ನಡುವಿನ ಕಲಿಕೆ ಅಂತರಕ್ಕೆ ಪರಿಹಾರ ಸೂಚಿಸಿಲ್ಲ. ಶಾಲೆ ಬಿಡುವವರ ಸಂಖ್ಯೆಗೆ ಪರಿಹಾರ ಸೂಚಿಸಿಲ್ಲ.‌ ಪದವಿ ಓದುವವರು ಮಧ್ಯದಲ್ಲಿ ಬಿಟ್ಟರೆ‌ ಪ್ರಮಾಣ ಪತ್ರ ನೀಡುತ್ತಾರೆ. ಪದವೀಧರರಾಗುವುದನ್ನು ಮೊಟಕುಗೊಳಿಸುವುದು ಇದರಲ್ಲಿದೆ.

ಪ್ರಾಚೀನ ಸಂಸ್ಕೃತಿ, ಸಂಸ್ಕೃತ ಭಾಷಾ ಕಲಿಕೆಗೆ ಅನಗತ್ಯ ಒತ್ತು ನೀಡಿದ್ದಾರೆ. ರ್ಯಾಂಕ್‌ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ. ಹಾಗಾಗಿ, ಇಲ್ಲಿ ಹಳೆ ಪದ್ಧತಿ ಅನುಸರಿಸಿದರೆ ಶಿಕ್ಷಣ ಹಿಂದಕ್ಕೆ ‌ಹೋಗಲಿದೆ. ಈಗಾಗಲೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೀಟ್, ಜೆಇಇ ಪರೀಕ್ಷೆಗಳು ಕಷ್ಟಕರವಾಗಿದೆ. ಅವರಿಗೆ ಗಣಿತ, ಇಂಗ್ಲಿಷ್, ವಿಜ್ಞಾನದ ಉತ್ತಮ ಬೋಧನೆ ಬೇಕಾಗಿದೆ. ಆದರೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾಚೀನ ಮತ್ತ ಪುರಾತನ ಜ್ಞಾನಕ್ಕೆ ಹೆಚ್ಚು ಒತ್ತು ನೀಡಿದ್ದು, ಇದು ಪ್ರಗತಿಗೆ ವಿರೋಧ ಎಂದರು.

ಪಕ್ಷಾತೀತವಾಗಿ ಶಿಕ್ಷಣ ತಜ್ಞರ ಸಮಿತಿ ರಚನೆಯಾಗಬೇಕು : ‌ವೈಜ್ಞಾನಿಕ ತಳಹದಿಯಲ್ಲಿ ಶಿಕ್ಷಣ ರೂಪುಗೊಳ್ಳಬೇಕು ಎಂದು ಸಂವಿಧಾನದ ವಿಧಿ 28ರಲ್ಲಿ ಹೇಳಿದೆ.‌ ಸದನದಲ್ಲಿ‌ ಅಥವಾ ಪಾರ್ಲಿಮೆಂಟ್​​ನಲ್ಲಿ ಚರ್ಚೆಯಾಗಿಲ್ಲ. ಇಷ್ಟೊಂದು ಆತುರ ಯಾಕೆ? ಎಂದು ಪ್ರಶ್ನಿಸಿದ ಅವರು, ಶಿಕ್ಷಣ ತಜ್ಞರ ವಿಚಾರ ಸಂಕಿರಣ ಆಗಬೇಕು. ಅಹವಾಲುಗಳನ್ನು ಸ್ವೀಕರಿಸಬೇಕು. ಇದೆಲ್ಲವನ್ನು ಆಧರಿಸಿ ಶಿಕ್ಷಣ ನೀತಿ ಜಾರಿಯಾದರೆ ‌ನಿಜವಾಗಿಯೂ ಬಹಳ ಅನುಕೂಲ ಆಗಲಿದೆ. ಹೊಸ ಶಿಕ್ಷ ಣ ನೀತಿಯಲ್ಲಿ ನ್ಯೂನತೆಗಳನ್ನು ಸರಿಪಡಿಸಿ. ಹಿನ್ನೋಟ ಇರಬಾರದು ಎಂದರು.‌

ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಜಾಗರಣ ವೇದಿಕೆ ಗೂಂಡಾಗಿರಿ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಪತ್ರಕರ್ತರ ಮೇಲಿ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆಡಳಿತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯ: ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಧಿಕಾರಿಗಳಲ್ಲಿ ವೈಮನಸ್ಸು, ಹಾಡುಹಗಲೇ ದರೋಡೆ, ಅತ್ಯಾಚಾರ ನಡೆದಿದೆ. ಇದು ಉಸ್ತುವಾರಿ ಸಚಿವರ ವೈಫಲ್ಯವನ್ನು ತೋರಿಸುತ್ತದೆ. ಮಂತ್ರಿ, ಶಾಸಕ, ಸಂಸದರಾಗಿರಬಹುದು ನಿಮಗೆ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಕಾನೂನು ಪ್ರಕಾರ ಕಾರ್ಯನಿರ್ವಹಿಸಿಲ್ಲ ಎಂದರೆ ಅಧಿಕಾರಿಗಳು ಏನು ಮಾಡುತ್ತಾರೆ.

ರಾಜ್ಯದ ಆಗುಹೋಗುಗಳಿಗೆ ಮುಖ್ಯಮಂತ್ತಿಗಳೇ ಜವಾಬ್ದಾರರು. ಮತ ಕೊಟ್ಟು ಜನರು ನಿಮ್ಮನ್ನು ಕಳುಹಿಸಿರುವುದು ಒಳ್ಳೆಯ ಆಡಳಿತ ನೀಡಿ ಎಂದು, ಅಧಿಕಾರಿಗಳ ಮೇಲೆ ಆರೋಪ ಹೊರೆಸಲು ನೀವ್ಯಾರು? ಎಂದು ಧ್ರುವನಾರಾಯಣ್ ಪ್ರಶ್ನಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.