ETV Bharat / city

ವೈದ್ಯ ದಂಪತಿ ಮಗನ ಕಿಡ್ನಾಪ್​ ಪ್ರಕರಣ: ಚಾಣಾಕ್ಷತನದಿಂದ ಬಾಲಕನ ರಕ್ಷಣೆ - ಕುವೆಂಪು ನಗರ ಪೊಲೀಸ್ ಠಾಣೆ

ಮೈಸೂರು ನಗರದ ಬೆಮಲ್ ಬಡಾವಣೆಯ ರಸ್ತೆ ಮೇಲೆ ಸೈಕಲ್​ನಲ್ಲಿ ಆಟವಾಡುತ್ತಿದ್ದ 12 ವರ್ಷದ ವೈದ್ಯ ದಂಪತಿಯ ಮಗನನ್ನು ನೀಲಿ ಬಣ್ಣದ ಕಾರಿನಲ್ಲಿ ಬಂದ ಅಪಹರಣಕಾರರು ನಿನ್ನೆ ಕಿಡ್ನಾಪ್​ ಮಾಡಿದ್ದರು. ಇದೀಗ ಪೊಲೀಸರು ಚಾಣಾಕ್ಷತೆಯಿಂದ ಬಾಲಕನನ್ನು ರಕ್ಷಿಸಿದ್ದಾರೆ.

ವೈದ್ಯ ದಂಪತಿ ಮಗನ ಕಿಡ್ನಾಪ್​ ಪ್ರಕರಣ
ವೈದ್ಯ ದಂಪತಿ ಮಗನ ಕಿಡ್ನಾಪ್​ ಪ್ರಕರಣ
author img

By

Published : Jun 24, 2022, 10:35 AM IST

Updated : Jun 24, 2022, 12:20 PM IST

ಮೈಸೂರು: ಅಪಹರಣಗೊಂಡಿದ್ದ ನಗರದ ಬೆಮಲ್ ಬಡಾವಣೆಯ ವೈದ್ಯ ದಂಪತಿಯ ಪುತ್ರನನ್ನು ಪೊಲೀಸರು ಚಾಣಾಕ್ಷತೆಯಿಂದ ರಕ್ಷಿಸಿರುವ ಘಟನೆ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ರಸ್ತೆ ಮೇಲೆ ಸೈಕಲ್​ನಲ್ಲಿ ಆಟವಾಡುತ್ತಿದ್ದ 12 ವರ್ಷದ ವೈದ್ಯ ದಂಪತಿ ಮಗನನ್ನು ನೀಲಿ ಬಣ್ಣದ ಕಾರಿನಲ್ಲಿ ಬಂದ ಅಪಹರಣಕಾರರು ಕಿಡ್ನಾಪ್​ ಮಾಡಿದ್ದರು. ತಕ್ಷಣವೇ ಈ ವಿಚಾರವನ್ನು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಗುಪ್ತವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಪಹರಣಕಾರರಿಂದ ಮಗುವನ್ನು ರಕ್ಷಣೆ ಮಾಡಿದ್ದು, ಈ ಸಂಬಂಧ ಇಂದು ನಗರ ಪೊಲೀಸ್ ಆಯುಕ್ತರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ನಮಗೆ ಇಷ್ಟ ಇರದಿದ್ರೂ ಅಮೆರಿಕಕ್ಕೆ ಓದಲು ಹೋದ.. ಮಗನ ಸಾವಿನ ಸುದ್ದಿ ತಿಳಿದು ಆಘಾತಕೊಳ್ಳಗಾದ ತಂದೆ!

Last Updated : Jun 24, 2022, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.