ಮೈಸೂರು: ಬಿರುಬಿಸಿಲಿಗೆ ಭೂಮಿ ಸುಡುತ್ತಿದೆ. ನೀರಿನ ದಾಹ ನೀಗಿಸಲು ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ಸಂದಂರ್ಭದಲ್ಲಿ ಗ್ರಾಮಸ್ಥರು ಎಚ್ಚೆತ್ತುಕೊಂಡು ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
ಮೈಸೂರು ತಾಲ್ಲೂಕಿನ ದೊಡ್ಡರಸಿಕೆರೆ ಗ್ರಾಮಸ್ಥರು, ಗ್ರಾಮದ ಕೆರೆಗೆ ಮರುಜೀವ ಕೊಟ್ಟು, ಮುತುವರ್ಜಿಯಿಂದ ನೀರು ತುಂಬಿಸಿದ್ದಾರೆ. ಕಳೆದ ವರ್ಷ ಉತ್ತಮ ಮಳೆಯಾದಾಗ ಕೆರೆ ತುಂಬಿ ತುಳುಕಿತು. ಆದರೀಗ ಬೇಸಿಗೆ ಇರುವುದರಿಂದ ಕೆರೆಗಳಲ್ಲಿ ಬಟ್ಟೆ, ಪಾತ್ರೆಗಳನ್ನು ತೊಳೆಯದಂತೆ ತಾವೇ ನಿಯಮ ರೂಪಿಸಿಕೊಂಡಿದ್ದಾರೆ. ಮಳೆ ಆಗುವವರೆಗೂ ಕೆರೆಯ ನೀರನ್ನು ಜಾನುವಾರುಗಳ ಬಳಕೆಗೆ ಮೀಸಲಿಡಲಾಗಿದೆ.