ETV Bharat / city

ಪ್ರಜಾಪ್ರಭುತ್ವದ ಮೇಲೆ ಮೋದಿ, ಅಮಿತ್ ಶಾ ದಾಳಿ ಮಾಡುತ್ತಿದ್ದಾರೆ: ಸುರ್ಜೇವಾಲಾ - randeep singh surjewala Slams PM Narendra Modi and Amit Shah

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಉಲ್ಬಣಿಸಿದೆ. ಆಕ್ಸಿಜನ್, ಔಷಧ ಸಿಗದೇ ಜನ ಪರದಾಡುತ್ತಿದ್ದಾರೆ. ಆದರೆ ಪ್ರಧಾನಿ, ನಡ್ಡಾ, ಬೊಮ್ಮಾಯಿ‌ ಮೀಟಿಂಗ್ ಮಾಡುತ್ತಿದ್ದಾರೆ. ಇವರಿಗೆ ಅಧಿಕಾರವೇ ಮುಖ್ಯ, ಜನರಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್​ ಸುರ್ಜೇವಾಲಾ ವಾಗ್ದಾಳಿ‌ ನಡೆಸಿದರು.

Mysore
ರಣದೀಪ್ ಸುರ್ಜೇವಾಲ ಸುದ್ದಿಗೋಷ್ಠಿ
author img

By

Published : Jul 31, 2021, 4:29 PM IST

ಮೈಸೂರು: ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾಧ್ಯಮ ಸೇರಿದಂತೆ ಸ್ವತಂತ್ರ ಸಂಸ್ಥೆಗಳ ಮೇಲೆ ಮೋದಿ ಹಾಗೂ ಅಮಿತ್ ಶಾ ದಾಳಿ ಮಾಡುತ್ತಿದ್ದಾರೆ. ಆ ಸಂಸ್ಥೆಗಳನ್ನು ತಮಗೆ ಬೇಕಾದ ರೀತಿಯಲ್ಲಿ‌ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್​ ಸುರ್ಜೇವಾಲಾ ಆರೋಪಿಸಿದ್ದಾರೆ.

ಮೋದಿ, ಅಮಿತ್ ಶಾ ವಿರುದ್ದ ರಣದೀಪ್ ಸಿಂಗ್​ ಸುರ್ಜೇವಾಲಾ ವಾಗ್ದಾಳಿ

ನಗರದ ಖಾಸಗಿ ಹೋಟೆಲ್​​ನಲ್ಲಿ‌ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಫೋನ್​​ ಟ್ಯಾಪ್ ಮಾಡುವ ಮೂಲಕ ಸರ್ಕಾರವನ್ನು ಬೀಳಿಸಲಾಯಿತು. ಅದೇ ರೀತಿ ಯಡಿಯೂರಪ್ಪ ಅವರನ್ನು ಕೆಳಗಿಸಲಾಯಿತು. ಕರ್ನಾಟಕ ಬಿಜೆಪಿ ಸರ್ಕಾರ ಸಂಪೂರ್ಣವಾಗಿ‌ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆ‌ರ್​​ಎಸ್‌ಎಸ್ ನವರು ಕೆಲವು ಭ್ರಷ್ಟ ಸಚಿವರನ್ನು ಬಿಡಿ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವು ಸಚಿವರು ಸಿಡಿ ವಿಚಾರದಲ್ಲಿ‌ ನ್ಯಾಯಲಯಕ್ಕೆ ಹೋಗಿದ್ದಾರೆ ಎಂದರು.

ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಮನೆ ಮಠ ಕಳೆದುಕೊಂಡಿದ್ದಾರೆ. ಇವರ ಕಷ್ಟ ಕೇಳಲು ಪ್ರ‍ಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿಲ್ಲ.‌ ಬಿಹಾರ ಮತ್ತು ಗುಜರಾತ್​​ಗೆ ಹೋಗುತ್ತಾರೆ. ಆದರೆ, ಕರ್ನಾಟಕ‌ ಭಾರತದ ಭೂಪಟದಲ್ಲಿ ಇದೆ ಎಂಬುದನ್ನು ಮರೆತ್ತಿದ್ದಾರೆ ಎಂದು ಸುರ್ಜೇವಾಲಾ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಖಾಸಗಿ ಹೋಟೆಲ್​​ನಲ್ಲಿ ಈ ವಿಭಾಗದ ಮುಖಂಡರ ಸಭೆ ಕರೆದಿದ್ದು, ಮುಂದೆ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಿ ಗೆಲುವು ಸಾಧಿಸುವ ಬಗ್ಗೆ ಅಭಿಪ್ರಾಯ ವಿನಿಮಯ ಹಾಗೂ ಮರು ಸಂಘಟನೆ ಬಗ್ಗೆ ಚರ್ಚಿಸಲಾಯಿತು.

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಉಲ್ಬಣಿಸಿದೆ. ಆಕ್ಸಿಜನ್, ಔಷಧ ಸಿಗದೇ ಜನ ಪರದಾಡುತ್ತಿದ್ದಾರೆ. ಆದರೆ ಪ್ರಧಾನಿ , ನಡ್ಡಾ, ಬೊಮ್ಮಾಯಿ‌ ಮೀಟಿಂಗ್ ಮಾಡುತ್ತಿದ್ದಾರೆ. ಇವರಿಗೆ ಅಧಿಕಾರವೇ ಮುಖ್ಯ, ಜನರಲ್ಲ. ಹಿರಿಯರನ್ನು ಕಡೆಗಣಿಸುವುದರಲ್ಲಿ ಮೋದಿ‌, ಅಮಿತ್​​ ಶಾ ಎತ್ತಿದ ಕೈ. ಅದೇ ರೀತಿ ಯಡಿಯೂರಪ್ಪ ಅವರನ್ನು ಸಹ ಕಡೆಗಣಿಸುತ್ತಾರೆ. ನಮಗೆ ಪ್ರತಿಯೊಂದು ಸಮುದಾಯವು ಮುಖ್ಯ. ಪ್ರತಿಯೊಂದು ಸಮುದಾಯವನ್ನು ಕಾಂಗ್ರೆಸ್ ಗೌರವಿಸುತ್ತದೆ ಎಂದು ಸುರ್ಜೇವಾಲಾ ಹೇಳಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಭೇಟಿ ವೇಳೆ BSY ಹಾಡಿ ಹೊಗಳಿದ ಪ್ರಧಾನಿ Modi!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.