ಮೈಸೂರು: ಅಕ್ರಮ ಸಂಬಂಧದ ಬ್ಲ್ಯಾಕ್ ಮೇಲ್ಗೆ ಹೆದರಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಬೋವಿ ಕಾಲೋನಿಯಲ್ಲಿ ನಡೆದಿದೆ.
ಬೋವಿ ಕಾಲೋನಿಯ ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಗಂಡನನ್ನು ಕಳೆದಕೊಂಡಿದ್ದ ಅದೇ ಗ್ರಾಮದ ವಿಧವೆಯೊಂದಿಗೆ ಸ್ವಾಮಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಜ.16ರ ರಾತ್ರಿ 10 ಸಮಯದಲ್ಲಿ ಸ್ವಾಮಿ, ವಿಧವೆ ಮನೆಗೆ ಹೋಗುವುದನ್ನು ನೋಡಿದ ಮೋಹನ್ ಕುಮಾರ್ ಕೂಡ ಮನೆಯೊಳಗೆ ನುಗ್ಗಿದ್ದ ಎನ್ನಲಾಗ್ತಿದೆ.
ಓದಿ-ರಣರಂಗವಾಯ್ತು ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ತಾತ್ಕಾಲಿಕ ಇಂಟರ್ನೆಟ್ ಸ್ಥಗಿತ
ನಂತರ, ಸ್ವಾಮಿ ಹಾಗೂ ವಿಧವೆಯನ್ನು ಬೆತ್ತಲೆಗೊಳಿಸಿ ಮೋಹನ್ ವಿಡಿಯೋ ಮಾಡಿದ್ದಾನೆ. ನನ್ನ ಜೊತೆಯಲ್ಲಿ ಆಕೆ ಸಹಕರಿಸಿದರೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಿಲ್ಲ. ಸಹಕರಿಸದಿದ್ದರೆ ವಿಡಿಯೋ ಅಪ್ಲೋಡ್ ಮಾಡ್ತೀನಿ ಎಂದು ಬೆದರಿಸಿದ್ದನಂತೆ.
ಇದರಿಂದ ನೊಂದ ಸ್ವಾಮಿ ತನ್ನ ಮನೆಗೆ ಬಂದು ಜ.17ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪೋಷಕರು ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿ ಸುಮ್ಮನಿದ್ದರು. ಆದರೆ, ಜ.19ರಂದು ವಿಧವೆ, ಸ್ವಾಮಿ ಅಣ್ಣನಾದ ಬಾಬುಗೆ ಕರೆಮಾಡಿ ನಡೆದ ವೃತ್ತಾಂತವನ್ನು ಹೇಳುತ್ತಾಳೆ.
ಇಂದು ಬನ್ನೂರು ಠಾಣೆಯಲ್ಲಿ ಸ್ವಾಮಿ ಸಹೋದರ ಬಾಬು, ವಿಧವೆ ಹಾಗೂ ಮೋಹನ್ ಕುಮಾರ್ ದೂರು ದಾಖಲಿಸಿದದ್ದಾರೆ. ಆದ್ರೆ ವಿಧವೆ ಕೂಡಾ ಮೋಹನ್ ಕುಮಾರ್ ವಿರುದ್ಧ ದೂರು ನೀಡಿದ್ದಾಳೆ. ಸದ್ಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಪೊಲೀಸರು, ಮತ್ತಷ್ಟು ಸತ್ಯವನ್ನು ಬಯಲು ಮಾಡಬೇಕಿದೆ.