ETV Bharat / city

ನಮಗೆ ಯಾಕೆ ಇಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ: ರಾಜಮಾತೆ ಹೀಗೆ ಹೇಳಿದ್ದೇಕೆ? - Etv bharat kannada

ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಂಗಳವಾರ ಅರಮನೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, 1951 ರಲ್ಲಿ ರಾಜಮನೆತನದ ಖಾಸಗಿ ಆಸ್ತಿಗಳನ್ನು ಪಟ್ಟಿಮಾಡಿ, ಈ ಆಸ್ತಿಗಳು ರಾಜ ವಂಶಸ್ಥರಿಗೆ ಸೇರಿದವು ಎಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆದರೂ ನಮಗೆ ತೊಂದರೆ ನೀಡಲಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

Rajamate Pramodadevi Wodeyar news
ರಾಜಮಾತೆ ಪ್ರಮೋದಾದೇವಿ ಒಡೆಯರ್
author img

By

Published : Jul 26, 2022, 5:26 PM IST

ಮೈಸೂರು: ಯಾವುದು ನಮ್ಮ ಖಾಸಗಿ ಆಸ್ತಿ, ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಯಾಕಿಷ್ಟು ನಮಗೆ ಹಿಂಸೆ ಕೊಡುತ್ತಾರೆ ಎಂಬುದು ಮಾತ್ರ ಗೊತ್ತಿಲ್ಲ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದರು.

ಅರಮನೆಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿದ ಪ್ರಮೋದಾದೇವಿ ಒಡೆಯರ್, ರಾಜ್ಯ ವಿಲೀನ ಮಾಡುವ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ರಾಜ ವಂಶಸ್ಥರ ನಡುವೆ ಒಪ್ಪಂದ ಏರ್ಪಟ್ಟಿತ್ತು. ಅದರಂತೆ ರಾಜ ಮನೆತನದ ಖಾಸಗಿ ಆಸ್ತಿಗಳನ್ನು ಘೋಷಣೆ ಮಾಡಿ, ಉಳಿದ ಎಲ್ಲಾ ಆಸ್ತಿಗಳನ್ನು ದೇಶದೊಂದಿಗೆ ವಿಲೀನ ಮಾಡಲಾಯಿತು. ಈ ಸಂಬಂಧ 1950 ರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ ವಂಶಸ್ಥರ ನಡುವೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ 1951 ರಲ್ಲಿ ರಾಜಮನೆತನದ ಖಾಸಗಿ ಆಸ್ತಿಗಳನ್ನು ಪಟ್ಟಿಮಾಡಿ, ಈ ಆಸ್ತಿಗಳು ರಾಜ ವಂಶಸ್ಥರಿಗೆ ಸೇರಿದವು ಎಂದು ಸರ್ಕಾರಿ ಆದೇಶ ಹೊರಡಿಸಲಾಗಿತ್ತು.

ಈ ಆದೇಶ ಸರ್ಕಾರಿ ದಾಖಲೆಗಳಲ್ಲೂ ಇದೆ. ಇದರಲ್ಲಿ ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವವರಿಗೆ ಗೊತ್ತು. ಆದರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ರಾಜ ವಂಶಸ್ಥರಿಗೆ ಯಾವುದೇ ಸಂಸ್ಥೆ ಇಲ್ಲ. ಇಲ್ಲಿ ಮಾತ್ರ ಮೈಸೂರು ಅರಮನೆ, ಬೆಂಗಳೂರು ಅರಮನೆ ಸೇರಿದಂತೆ ಇತರೇ ರಾಜ ವಂಶಸ್ಥರ ಆಸ್ತಿಗಳ ಬಗ್ಗೆ ಪ್ರಕರಣಗಳು ಇವೆ. ಈ ಮೂಲಕ ಯಾಕಿಷ್ಟು ನಮಗೆ ಹಿಂಸೆ ಕೊಡುತ್ತಿದ್ದಾರೆ ಗೊತ್ತಿಲ್ಲ ಎಂದು ರಾಜಮಾತೆ ತಮ್ಮ ಅಳಲನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು.

ರಾಜಮಾತೆ ಪ್ರಮೋದಾದೇವಿ ಒಡೆಯರ್

ಖಾಸಗಿ ಆಸ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಏಕೆ?: ಬೇಬಿ ಬೆಟ್ಟ ಹಾಗೂ ಸುತ್ತಮುತ್ತಲ 1,623 ಎಕರೆ ನಮ್ಮ ಖಾಸಗಿ ಆಸ್ತಿ. ಈ ಆಸ್ತಿಯನ್ನು ಸರ್ಕಾರಿ ಅಧಿಕಾರಿಗಳು ಬಿ-ಖರಾಬ್ ಜಮೀನು ಎಂದು ಘೋಷಣೆ ಮಾಡಿದ್ದಾರೆ. ಅಂದರೆ ಸರ್ಕಾರಿ ಭೂಮಿ ಎಂದು ಅರ್ಥ. ಇದರ ಪರಿಣಾಮವಾಗಿ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿದೆ. ಆದರೆ ದಾಖಲಾತಿಗಳಲ್ಲಿ ಅದು ನಮಗೆ ಸೇರಿದ ಭೂಮಿಯಾಗಿದೆ. ಇಂತಹ ಸ್ಥಳದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ ಎಂದು ರಾಜಮಾತೆ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೇಬಿಬೆಟ್ಟದ ವಿವಾದಕ್ಕೆ ರಾಜಮಾತೆ ಎಂಟ್ರಿ : ಟ್ರಯಲ್ ಬ್ಲಾಸ್ಟ್​ ನಡೆಸದಂತೆ ಡಿಸಿಗೆ ಪತ್ರ

ಈ ಸಂದರ್ಭದಲ್ಲಿ ಕನಿಷ್ಠ ನಮ್ಮ ಅನುಮತಿಯನ್ನಾದ್ರು ಪಡೆಯಬೇಕು. ಆದರೆ ಉದ್ದೇಶ ಪೂರ್ವಕವಾಗಿ ಏಕೆ ಗೊಂದಲ ಉಂಟು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಬ್ಲಾಸ್ಟ್ ಮಾಡಲು ಬಂದ ವಿಜ್ಞಾನಿಗಳಿಗೆ ಎಷ್ಟು ದೂರದವರೆಗೆ ಪರಿಣಾಮ ಉಂಟಾಗುತ್ತದೆ ಎಂಬುದರ ಅರಿವಿರಬೇಕು. ಒಂದು ವೇಳೆ ಟ್ರಯಲ್ ಬ್ಲಾಸ್ಟ್ ಮಾಡಬೇಕು ಎಂದಾದರೆ ಸರ್ಕಾರಿ ಜಾಗದಲ್ಲಿ ಮಾಡಿ. ನಮ್ಮ ಖಾಸಗಿ ಬೇಬಿ ಬೆಟ್ಟದಲ್ಲಿ ಯಾಕೆ ಮಾಡಬೇಕು ಎಂದು ವಿಜ್ಞಾನಿಗಳನ್ನು ಪ್ರಮೋದಾದೇವಿ ಒಡೆಯರ್ ಪ್ರಶ್ನೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.