ಮೈಸೂರು: ಚಹಾ ಮಾರುವವರೇ ದೇಶದ ಪ್ರಧಾನಿಯಾಗಿಲ್ವೇ, ಹಾಗೇ ನಾನೂ ಸಿಮೆಂಟ್, ರಸಗೊಬ್ಬರ ಮಾರುತ್ತಿದ್ದ ವ್ಯಕ್ತಿ ಸಂಸದನಾದೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರಿಗೆ ಮೈತ್ರಿ ಕ್ಯಾಂಡಿಡೇಟ್ ವಿಜಯಶಂಕರ್ ತಿರುಗೇಟು ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಜಯಶಂಕರ್ ಸಿಮೆಂಟ್ ಮಾರಿದ್ರು ಎಂಬ ಪ್ರತಾಪಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯಶಂಕರ್, ಚಾಯ್ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಿಲ್ವಾ. ಹೌದು, ನಾನು ಸಿಮೆಂಟ್ ಮಾರುತ್ತಿದ್ದೆ. ಜನರಿಗೆ ಸುಳ್ಳು ಹೇಳಿಲ್ಲ, ಮೋಸ ಮಾಡಿಲ್ಲ ಎಂದು ಹೇಳಿದರು.
ಪ್ರತಾಪಸಿಂಹ ಅವರು ಸಂಸದರಾಗಿ ಗ್ರಾಮ ಪಂಚಾಯತ್ ಕೆಲಸವನ್ನೂ ಮಾಡಿಲ್ಲ. ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ನಾನು ಮೊದಲ ಹಂತದ ಕೆಲಸ ಮಾಡಿಸಿದೆ. ಅದನ್ನು ನಾನು ಮಾಡಿಸಿದೇ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪ್ರತಾಪಸಿಂಹ ಅವರು ಚರ್ಚೆಗೆ ಬರಲಿ ಉತ್ತರ ಕೊಡುತ್ತೀನಿ ಎಂದು ಹರಿಹಾಯ್ದರು.