ಮೈಸೂರು: 7ನೇ ನವಾಬ್ ಸರ್ಮೀರ್ ಓಸ್ಮಾನ್ ಅಲಿಖಾನ್ ನಿಜಾಮ್ರ ಮೊಮ್ಮಗ ನವಾಬ್ ಮೀರ್ ನಜಾಫ್ ಅಲಿಖಾನ್ ಅವರು ಮೈಸೂರಿನ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನ ಇಂದು ಅರಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮೂರು ತಲೆಮಾರುಗಳನ್ನ ಮೀರಿದ ರಾಜಮನೆತನದವರು 100 ವರ್ಷಗಳ ನಂತರ ಪರಸ್ಪರ ಮರು ಸಂಪರ್ಕ ಮಾಡಿದ್ದಾರೆ. ಈ ವೇಳೆ, ಯದುವೀರ್ ಒಡೆಯರ್ ಮತ್ತು ಮೀರ್ ನಜಾಫ್ ಅಲಿಖಾನ್ರು ತಮ್ಮ ಪೂರ್ವಜರ ಶ್ರೇಷ್ಠತೆ ಮೆಲುಕು ಹಾಕಿದ್ದಾರೆ.
ಬ್ರಿಟಿಷರ ವಿರುದ್ಧ ಅಂದಿನ ಇತರ ರಾಜರುಗಳ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಆಸಿಫ್ ಜಾ ಅವರ ಪಾತ್ರ ಉನ್ನತವಾದದು ಎಂದು ಯದುವೀರ್ ಅವರು ಇದೇ ವೇಳೆ ಹೇಳಿದರು. ಜೊತೆಗೆ 1965 ರಲ್ಲಿ ಭಾರತ ಚೀನಾ ಯುದ್ಧದ ಸಮಯದಲ್ಲಿ ಓಸ್ಮಾನ್ ಅಲಿ ಖಾನ್ ಅವರು ದೇಶವನ್ನು ಬೆಂಬಲಿಸಲು 5 ಸಾವಿರ ಕೆ ಜಿ ಚಿನ್ನವನ್ನು ಕೊಡುಗೆಯಾಗಿ ನೀಡಿದ್ದರು ಎಂದು ಸ್ಮರಿಸಿದರು.
ಮೈಸೂರು ಅರಮನೆಯ ಪ್ರಮುಖ ಭಾಗದ ನಿರ್ಮಾಣಕ್ಕೆ ನಿಜಾಮರು ಬೆಂಬಲ ನೀಡಿದ್ದರು. ಮತ್ತು ಅದೇ ಸಮಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸಹ ಬೆಂಬಲಿಸಿದ್ದಾರೆ. ಹೀಗಾಗಿ ಆ ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಿಹೆಚ್ಡಿ ಪಡೆಯಲು ಸಹಾಯವಾಯಿತು ಎಂಬುದನ್ನು ನೆನೆಪು ಮಾಡಿಕೊಂಡರು.
ಯದುವೀರ್ ಕೃಷ್ಣದತ್ತ ಒಡೆಯರ್ ಅವರು 100 ವರ್ಷಗಳಷ್ಟು ಹಳೆಯದಾದ ನವಾಬ್ ಸರ್ಮೀರ್ ಓಸ್ಮಾನ್ ಅಲಿ ಖಾನ್ ಅವರ ಫೋಟೋವನ್ನು ನವಾಬ್ ಮೀರ್ ನಿಜಾಫ್ ಅಲಿ ಖಾನ್ ಅವರಿಗೆ ತೋರಿಸಿದರು.
ಓದಿ: ಸಮವಸ್ತ್ರ ನಿಗದಿಯಾದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲ್ಗೆ ಅವಕಾಶ ಇಲ್ಲ: ಸಚಿವ ಅಶ್ವತ್ಥ ನಾರಾಯಣ