ಮೈಸೂರು: ನನ್ನ ಮೇಲೆ ನಟ ದರ್ಶನ್ ಹಲ್ಲೆ ಮಾಡಿಲ್ಲ. ಸರ್ವಿಸ್ನಲ್ಲಿ ತಡ ಆಗಿದ್ದಕ್ಕೆ ಬೈದರು ಅಷ್ಟೇ ಎಂದು ಹಲ್ಲೆ ಆರೋಪಕ್ಕೆ ಹೋಟೆಲ್ ಸಪ್ಲೈಯರ್ ಗಂಗಾಧರ್ ಹೇಳಿಕೆ ನೀಡಿದರು.
ನಟ ದರ್ಶನ್ ದಿ ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ಗಂಗಾಧರ್ ಎಂಬ ಸರ್ವಿಸ್ ಮಾಡುವ ವ್ಯಕ್ತಿಯ ಮೇಲೆ ದೃಷ್ಟಿ ಹೋಗುವ ರೀತಿ ಹೊಡೆದಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಇತ್ತೀಚೆಗೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹೋಟೆಲ್ಗೆ ಆಗಮಿಸಿದ ಎಸಿಪಿ ಶಶಿಧರ್ ನೇತೃತ್ವದ ತಂಡ ಗಂಗಾಧರ್ ಎಂಬ ವ್ಯಕ್ತಿಯಿಂದ ಮಾಹಿತಿ ಪಡೆದರು.
ಈ ವಿಚಾರವಾಗಿ ಗಂಗಾಧರ್ ಮಾಧ್ಯಮಗಳ ಜೊತೆ ಮಾತನಾಡಿ, ಮೊದಲಾಗಿ ನಾನು ದಲಿತನಲ್ಲ. ಕೇರಳದ ನಾಯರ್ ಜನಾಂಗಕ್ಕೆ ಸೇರಿದವನಾಗಿದ್ದೇನೆ. ಘಟನೆ ನಡೆದ ದಿನ ಸರ್ವಿಸ್ನಲ್ಲಿ ತಡವಾಗಿದೆ ಎಂದು ದರ್ಶನ್ ಕೋಪಗೊಂಡರು, ಆದರೆ ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದರು.
ಇದೇ ವೇಳೆ ಅವರು, ನನ್ನ ಎರಡೂ ಕಣ್ಣುಗಳು ಸರಿಯಿದೆ ನೋಡಿ ಎಂದು ತೋರಿಸಿದರು. ನನಗೆ ಮದುವೆಯಾಗಿಲ್ಲ. ನಾನು ಬ್ಯಾಚುಲರ್. ಯಾರು ಪೊರಕೆ ಹಿಡಿದುಕೊಂಡು ಬಂದರೋ ಗೊತ್ತಿಲ್ಲ. ಮೈಸೂರಿನಲ್ಲೇ ಹುಟ್ಟಿ ಬೆಳೆದವನು. ಹುಟ್ಟಿದ್ದು ಮಾತ್ರ ಕೇರಳ ಎಂದು ಅಂದಿನ ಘಟನೆಯನ್ನು ವಿವರಿಸಿದರು.