ಮೈಸೂರು : ಮಹಾನಗರ ಪಾಲಿಕೆ ತೋಟಗಾರಿಕೆಗೆ ಸಹಕಾರ ನೀಡಿ, ನಗರದ ಎಲ್ಲ ವಾಡ್೯ಗಳ ಮನೆ ಮನೆಗೆ ತರಕಾರಿ ಮತ್ತು ಹಣ್ಣು ತಲುಪಿಸುವ ಸೇವೆ ಪ್ರಾರಂಭಿಸಿದೆ.
ಇಂದಿನಿಂದ ಜೂನ್ 7ರವರೆಗೆ ಜಿಲ್ಲೆಯಾದ್ಯಂತ ಕಠಿಣ ಲಾಕ್ಡೌನ್ ಇರುವುದರಿಂದ ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಮನೆಯಿಂದ ಆಚೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಮನೆಗೆ ತರಕಾರಿ ಮತ್ತು ಹಣ್ಣು ತಲುಪಿಸುವ ಸೇವೆ ಪ್ರಾರಂಭಿಸಿದೆ. ಇದರಿಂದ ಜನರಿಗಷ್ಟೇ ಅಲ್ಲ, ರೈತರಿಗೂ ನೆರವಾಗಲಿದೆ.
ನಗರದ ಒಟ್ಟು 65 ವಾಡ್೯ಗಳಲ್ಲಿ 11 ಗೂಡ್ಸ್ ಆಟೋಗಳ ಮುಖಾಂತರ ತೋಟಗಾರಿಕೆ ಇಲಾಖೆ ಸಿಬ್ಬಂದಿ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮನೆ ಮನೆಗೆ ತೆರಳಿ ನಿಗದಿತ ದರದಲ್ಲಿಯೇ ಹಣ್ಣು, ತರಕಾರಿ ಮಾರಾಟ ಮಾಡಲಿದ್ದಾರೆ. ಜೂನ್ 7ರವರೆಗೆ ಮನೆ-ಮನೆಗೆ ತರಕಾರಿ ಬರಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಅಣ್ಣೇಗೌಡ, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮನೆ ಬಾಗಿಲಿಗೆ ಹಣ್ಣು, ತರಕಾರಿ ಕಳುಹಿಸಲು ನಿರ್ಧರಿಸಿದ್ದೇವೆ. ನಿಗದಿತ ದರದಲ್ಲಿಯೇ ಸಿಬ್ಬಂದಿ ವ್ಯಾಪಾರ ಮಾಡಲಿದ್ದಾರೆ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರುದ್ರೇಶ್ ಮಾತನಾಡಿ, ನಗರ ಪಾಲಿಕೆ ಸಹಕಾರದಿಂದ ಮನೆ ಬಾಗಿಲಿಗೆ ತರಕಾರಿ ಹೋಗಲಿದೆ. 11 ವಾಹನದಲ್ಲಿ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮಾರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಓದಿ: ಡಿಸಿ ಹಾಗೂ ಜನಪ್ರತಿನಿಧಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಎಸ್.ಟಿ.ಸೋಮಶೇಖರ್