ಮೈಸೂರು: ಹುಣಸೂರು ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.
ಹೆಚ್.ಡಿ.ಕುಮಾರಸ್ವಾಮಿ ಹುಣಸೂರು ತಾಲೂಕಿನ ಕೋಣನ ಹೊಸಹಳ್ಳಿ, ಕೊಳವಿಗೆ, ಮುದಗನೂರು, ಚಿಕ್ಕಹೆಜ್ಜೂರು, ದೊಡ್ಡಹೆಜ್ಜೂರು, ವೀರತಯ್ಯನಕೊಪ್ಪಲಿ, ಭರತವಾಡಿ ಹಾಡಿ, ವೀರನಹೊಸಳ್ಳಿ ಸೇರಿದಂತೆ 21 ಗ್ರಾಮಗಳ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
ದೊಡ್ಡಹೆಜ್ಜೂರು ಗ್ರಾಮದಲ್ಲಿ ಸಿರಿಗೌಡ ಅವರ ಮನೆ ಭೇಟಿ ನೀಡಿ ಟೀ ಕುಡಿದು ಗ್ರಾಮಸ್ಥರ ಮನವೊಲಿಸಿ ಜೆಡಿಎಸ್ಗೆ ಲೀಡ್ ಕೊಡಿಸಿ ಎಂದು ಮನವಿ ಮಾಡಿದರು. ನಂತರ ಅಲ್ಲಿಂದ ಕೊಳವಿಗೆ ಪುರಾಣ ದೇವಸ್ಥಾನವಾದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಯಕಾರ ಕೂಗಿದರು.