ETV Bharat / city

ಸುಖಾಂತ್ಯ ಕಂಡ ಪ್ರೇಮ ವಿವಾಹ, ಪೋಷಕರಿಗೆ ಬುದ್ಧಿ ಹೇಳಿದ ಪೊಲೀಸರು

ಮೈಸೂರಿನಲ್ಲಿ ನಡೆದ ಪ್ರೇಮ ವಿವಾಹವೊಂದು ಸುಖಾಂತ್ಯ ಕಂಡಿದೆ.

happy ending of love marriage, Love marriage issue in Mysore, Mysuru news, ಸುಖ್ಯಾಂತ ಕಂಡ ಪ್ರೇಮ ವಿವಾಹ, ಮೈಸೂರು ಪ್ರೇಮ ವಿವಾಹ ವಿವಾದ, ಮೈಸೂರು ಸುದ್ದಿ,
ಸುಖ್ಯಾಂತ ಕಂಡ ಪ್ರೇಮ ವಿವಾಹ
author img

By

Published : Dec 22, 2021, 12:58 AM IST

Updated : Dec 22, 2021, 6:55 AM IST

ಮೈಸೂರು: ಅನ್ಯ ಜಾತಿಯ ಯುವಕನ ಜೊತೆ ಪ್ರೇಮ ವಿವಾಹಕ್ಕೆ ಮುಂದಾದ ಮಗಳ ಮೇಲೆ ತಂದೆ ಅಮಾನುಷವಾಗಿ ವರ್ತಿಸಿದ್ದಾನೆ. ಜುಟ್ಟು ಹಿಡಿದು ಎಳೆದಾಡಿದಲ್ಲದೆ, ಮಾಂಗಲ್ಯ ಸರವನ್ನೂ ಕಿತ್ತೆಸೆದಿದ್ದಾನೆ. ಹಾದಿ ಬೀದಿ ರಂಪಾಟವಾದ ಆ ಜೋಡಿಯ ಪ್ರೇಮ ವಿಹಾಹ ಪೊಲೀಸ್ ಠಾಣೆ ಮೆಟ್ಟಿಲೇರಿ ಕೊನೆಗೆ ಸುಖಾಂತ್ಯಗೊಂಡಿದೆ.

ಪೋಷಕರ ವಿರೋಧವನ್ನ ಲೆಕ್ಕಿಸದೆ ಪ್ರೀತಿಸಿದ ಯುವಕನನ್ನ ಮದುವೆಯಾದ ಯುವತಿಯನ್ನ ಹೆತ್ತ ತಂದೆಯೇ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದ ಘಟನೆ ನಂಜನಗೂಡಿನಲ್ಲಿ ನಡೆಯಿತು.

ಮಗಳ ಮಾಂಗಲ್ಯ ಸರ ಕಿತ್ತುಹಾಕಿದ ತಂದೆ ಜುಟ್ಟು ಹಿಡಿದು ಎಳೆದಾಡಿ ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾರೆ. ತಂದೆಯ ಯತ್ನ ವಿಫಲವಾಗಿದೆ. ತಂದೆಗೆ ಡೋಂಟ್ ಕೇರ್ ಎಂದ ಮಗಳು ಸಾರ್ವಜನಿಕರ ನೆರವಿನಿಂದ ತಪ್ಪಿಸಿಕೊಂಡು ಪ್ರಿಯತಮನನ್ನ ಸೇರಿಕೊಂಡಿದ್ದಾಳೆ.ತನಗೆ ತನ್ನ ತಂದೆಯಿಂದ ರಕ್ಷಣೆ ಬೇಕು ಎಂದು ಸಾರ್ವಜನಿಕವಾಗೇ ಅವಲತ್ತುಕೊಂಡಿದ್ದಾಳೆ.ನಂಜನಗೂಡಿನ ವಿವಾಹ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಮನಮಿಡಿಯುವ ಘಟನೆ ನಡೆದಿದೆ.

ಓದಿ: ಸಾವು ಬದುಕಿನ‌‌ ಮಧ್ಯೆ ಹೋರಾಡುತ್ತಿರೋ ಅಪ್ಪಟ ಅಭಿಮಾನಿ ಆಸೆ ಪೂರೈಸಿದ ತಲೈವಾ

ನಂಜನಗೂಡು ತಾಲೂಕು ಹರತಲೆ ಗ್ರಾಮದ ಯುವತಿಗೆ ಇಂತಹ ಕಹಿ ಅನುಭವವಾಗಿದೆ. ಹರತಲೆ ಗ್ರಾಮದ ಯುವತಿ ಹಾಗೂ ಹಲ್ಲರೆಗ್ರಾಮದ ಯುವಕ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸಿದ್ದು ಡಿಸೆಂಬರ್ 8 ರಂದು ಮದುವೆ ಆಗಿದ್ದು ಇಂದು ನೊಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನ ನೊಂದಾಯಿಸಿಕೊಳ್ಳಲು ಬಂದಿದ್ದರು.

happy ending of love marriage, Love marriage issue in Mysore, Mysuru news, ಸುಖ್ಯಾಂತ ಕಂಡ ಪ್ರೇಮ ವಿವಾಹ, ಮೈಸೂರು ಪ್ರೇಮ ವಿವಾಹ ವಿವಾದ, ಮೈಸೂರು ಸುದ್ದಿ,
ಸುಖ್ಯಾಂತ ಕಂಡ ಪ್ರೇಮ ವಿವಾಹ

ನೊಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಚೈತ್ರ ತಂದೆ ಬಸವರಾಜ ನಾಯ್ಕ ಪ್ರತ್ಯಕ್ಷವಾಗಿ ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ತುಹಾಕಿ ಜುಟ್ಟು ಹಿಡಿದು ಎಳೆದಾಡುತ್ತಾ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರ ಎದುರೇ ಇಂತಹ ಯತ್ನ ನಡೆದಿದೆ. ತಂದೆಯ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಯುವತಿ ಹರಸಾಹಸ ನಡೆಸಿದ್ದಾಳೆ.ಈ ವೇಳೆ ಸಾರ್ವವಜನಿಕರು ಮಧ್ಯ ಪ್ರವೇಶಿಸಿ ಯುವತಿಯನ್ನು ಬಿಡಿಸಿದ್ದಾರೆ.

ಯುವತಿ, ತಮ್ಮ ಮದುವೆಗೆ ಪೋಷಕರ ವಿರೋಧ ಇದೆ. ಈ ಮಧ್ಯೆ ಬೆದರಿಕೆಯೂ ಇದೆ ಎಂದು ಪ್ರಿಯತಮನನ್ನ ತಬ್ಬಿಹಿಡಿದು ಆತಂಕ ವ್ಯಕ್ತಪಡಿಸುತ್ತಿದ್ದಳು. ತನ್ನ ತಂದೆಯಿಂದಲೇ ತನಗೆ ರಕ್ಷಣೆ ಬೇಕೆಂದು ನಂಜನಗೂಡು ಪೊಲೀಸ್ ಠಾಣೆಗೆ ದೂರನ್ನ ಕೊಟ್ಟಿದ್ದಳು. ದೂರಿನನ್ವಯ ತಂದೆ‌ ಬಸವರಾಜ ನಾಯ್ಕನನ್ನ ಸೇರಿದಂತೆ ಎರಡೂ ಕುಟುಂಬಗಳನ್ನ ಕರೆಸಿ ರಾಜೀ ಮಾಡುವ ಮೂಲಕ ಪ್ರಕರಣಕ್ಕೆ ಸುಖಾಂತ್ಯ ಹಾಡಲಾಗಿದೆ.

Last Updated : Dec 22, 2021, 6:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.