ಮೈಸೂರು : ಅಂತಾರಾಜ್ಯ ನದಿ ನೀರು ಹಂಚಿಕೆ ವಿಚಾರದಲ್ಲಿ ನಾವು ಹೋರಾಟದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದರು.
ಮೈಸೂರಿನ ಸಾಲಿಗ್ರಾಮದಲ್ಲಿ ತಾಲೂಕು ಜೆಡಿಎಸ್ ಕಚೇರಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಪಾದಯಾತ್ರೆ ರಾಜಕೀಯಕ್ಕಾಗಿ ಮಾಡಿದರೆಂದು ನಾನು ಹೇಳುವುದಿಲ್ಲ. ಆದರೆ, ಹೋರಾಟ ಮಾಡುವುದರಿಂದ ಗೆಲ್ಲಲು ಸಾಧ್ಯವಿಲ್ಲ. ಸಮಸ್ಯೆ ಬಗೆಹರಿಯಲು, ಯೋಜನೆ ಜಾರಿಯಾಗಲು ಕೋರ್ಟ್ಗೆ ಪೂರಕ ದಾಖಲೆಗಳನ್ನ ನೀಡಬೇಕು ಅನ್ನೋ ಮೂಲಕ ಪರೋಕ್ಷವಾಗಿ ಪಾದಯಾತ್ರೆಯನ್ನ ಟೀಕಿಸಿದರು.
ನನಗೆ ಇರುವ ಅನುಭವದಲ್ಲಿ ನಾನೆಂದು ಕಾವೇರಿ ವಿವಾದಕ್ಕೆ ಹೋರಾಟ ಮಾಡಿಲ್ಲ. ಅದರಲ್ಲಿ ಹೇಳುವುದು ತುಂಬಾ ಇದೆ. ನಾನು ಈಗ ಆ ಬಗ್ಗೆ ಮಾತನಾಡುವುದಿಲ್ಲ ಎಂದರು.
ಇದನ್ನೂ ಓದಿ: 'ಕಪಿಲಾ ನದಿಯಿಂದ ನಂಜನಗೂಡಿಗೆ ಸರಬರಾಜಾಗುವ ಕುಡಿಯುವ ನೀರು ಯೋಗ್ಯವಲ್ಲ'
ರಾಮನಗರದಿಂದಲೇ ಮತ್ತೆ ಕಾಂಗ್ರೆಸ್‌ನ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸುವ ವಿಚಾರವಾಗಿ ಮಾತನಾಡಿ, ಅಲ್ಲಿಂದಲೇ ಪಾದಯಾತ್ರೆ ಮಾಡಲಿ. ಇನ್ನು 10 ಬಾರಿ ಬರಲಿ ಎಂದರು. ರಾಮನಗರದ ಜನರು ನನ್ನನ್ನು ಸಿಎಂ ಮಾಡಿದರು.
ಅಲ್ಲಿಂದನೇ ನಾನು ಪ್ರಧಾನಮಂತ್ರಿ ಆಗಿದ್ದು. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದಾರೆಂಬುದನ್ನು ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದು ಹೇಳಿದರು.