ETV Bharat / city

ರಾಜ್ಯಪಾಲರ ಮೈಸೂರು ಪ್ರವಾಸ: ಅರಮನೆ, ಕೆಆರ್‌ಎಸ್ ವೀಕ್ಷಣೆ - governor thavarchand gehlot visited mysore palace

ಮೈಸೂರು ಪ್ರವಾಸ ಕೈಗೊಂಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಐತಿಹಾಸಿಕ ಅರಮನೆಗೆ ಭೇಟಿ ನೀಡಿದರು. ಬಳಿಕ ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನವನ್ನೂ ವೀಕ್ಷಿಸಿದ್ದಾರೆ.

governor-thavarchand-gehlot-visited-mysore-palace
ಮೈಸೂರು ಪ್ರವಾಸ: ಅರಮನೆ, ಕೆಆರ್ ಎಸ್ ವೀಕ್ಷಿಸಿದ ರಾಜ್ಯಪಾಲರು
author img

By

Published : Mar 22, 2022, 9:36 PM IST

ಮೈಸೂರು: ಮೈಸೂರು ಪ್ರವಾಸ ಕೈಗೊಂಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮೈಸೂರು ಅರಮನೆಗೆ ಭೇಟಿ ನೀಡಿ, ಅರಮನೆ ವೈಭವವನ್ನು ವೀಕ್ಷಣೆ ಮಾಡಿದರು. ರಾಜವಂಶಸ್ಥೆ ಪ್ರಮೋದಾ ದೇವಿ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ಬಳಿಕ ಕರ್ನಾಟಕದ ರಾಜ ಸಂಸ್ಕೃತಿ ಮತ್ತು ಮೈಸೂರು ಸಂಸ್ಥಾನದ ಇತಿಹಾಸವನ್ನು ರಾಜ್ಯಪಾಲರಿಗೆ ಅವರು ವಿವರಿಸಿದರು.

ಬಳಿಕ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನ ವೀಕ್ಷಿಸಿದ ಗೆಹ್ಲೋಟ್‌, ಸಂಗೀತ ನೃತ್ಯ ಕಾರಂಜಿಯ ಸೊಬಗನ್ನು ಆನಂದಿಸಿದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ, ಎಸ್ಪಿ ಯತೀಶ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

ಇದನ್ನೂ ಓದಿ: ವಿಡಿಯೋ: ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಟೈರ್​​ನಲ್ಲಿ ಸಿಲುಕಿ ಮಹಿಳೆ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.