ETV Bharat / city

ಸರ್ಕಾರಗಳು ಒಂದು ಧರ್ಮದ ಪರವಾಗಿ ಇರಬಾರದು: ಸಿದ್ದರಾಮಯ್ಯ

author img

By

Published : Apr 18, 2022, 7:08 AM IST

ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ಹಾಗೂ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಜನರು ಇಂತಹ ವಾತಾವರಣಕ್ಕೆ ಬಗ್ಗದೆ ಎಲ್ಲರೂ ಸಮಾನ ಎಂಬ ಭಾವನೆಯಿಂದ ಬದುಕಬೇಕು. ಸರ್ಕಾರ ಶಾಂತಿ ಮತ್ತು ಸಹಿಷ್ಣುತೆಯ ವಾತಾವರಣವನ್ನು ಕಾಪಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Siddaramaiah Participated in Iftihar Kuta
ಇಫ್ತಿಹಾರ್​ ಕೂಟದಲ್ಲಿ ಭಾಗಿಯಾದ ಸಿದ್ದರಾಮಯ್ಯ

ಮೈಸೂರು: ಸರ್ಕಾರಗಳು ಒಂದು ಧರ್ಮದ ಸರ್ಕಾರವಾಗಬಾರದು, ಇದರಿಂದ ಸಮಾಜಕ್ಕೆ ಅಪಾಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಗಳು ಎಲ್ಲ ಧರ್ಮವನ್ನು ಸಮಾನವಾಗಿ ನೋಡಬೇಕು ಎಂಬ ಕಾನೂನು‌ ಸಂವಿಧಾನದಲ್ಲಿ ಇದೆ. ಒಂದು ಧರ್ಮದ ಪರವಾಗಿ ಸರ್ಕಾರ ನಿಲ್ಲಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಸರ್ಕಾರಗಳು ಒಂದು ಧರ್ಮದ ಪರವಾಗಿದ್ದರೆ, ಸಮಾಜದಲ್ಲಿ ಶಾಂತಿ ಇರುವುದಿಲ್ಲ ಎಂದರು.

ಇಫ್ತಿಹಾರ್​ ಕೂಟದಲ್ಲಿ ಭಾಗಿಯಾದ ಸಿದ್ದರಾಮಯ್ಯ

ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ಹಾಗೂ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಜನರು ಇಂತಹ ವಾತಾವರಣಕ್ಕೆ ಬಗ್ಗದೆ ಎಲ್ಲರೂ ಸಮಾನ ಎಂಬ ಭಾವನೆಯಿಂದ ಬದುಕಬೇಕು. ಸರ್ಕಾರ ಶಾಂತಿ ಮತ್ತು ಸಹಿಷ್ಣುತೆಯ ವಾತಾವರಣವನ್ನು ಕಾಪಾಡಬೇಕು. ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದಾರೆ. ಅದರಂತೆ ನಾವು ಶಾಂತಿಯುತವಾಗಿ ಬದುಕಬೇಕು ಎಂದು ತಿಳಿಸಿದರು.

ಹಿಂದು, ಮುಸಲ್ಮಾನ, ಕ್ರೈಸ್ತ, ಸಿಖ್​ ಇದೆಲ್ಲಕ್ಕಿಂತ ಮೊದಲು ನಾವು ಭಾರತೀಯರು. ಒಟ್ಟಿಗೆ ಓದಿ, ಬೆಳೆದು, ಕೆಲಸ ಮಾಡುತ್ತಿರುವ ನಾವು ಒಟ್ಟಿಗೆ ಸೇರಿ ದೇಶವನ್ನು ಕಟ್ಟುವಂತಹ ಕೆಲಸ ಮಾಡಬೇಕು. ಅದರ ಬದಲಾಗಿ ಸಮಾಜವನ್ನು ಒಡೆಯುವಂತಹ ಕೆಲಸ ಮಾಡಬಾರದು. ಹಿಂದೂಗಳು, ಮುಸಲ್ಮಾನರು ಅವರವರ ಸಂಪ್ರದಾಯವನ್ನು ಪಾಲಿಸುತ್ತಾರೆ. ಹಿಂದೂಗಳು ಮುಸಲ್ಮಾನರ ಸಂಪ್ರದಾಯವನ್ನಾಗಲಿ, ಮುಸಲ್ಮಾನರು ಹಿಂದೂ ಸಂಪ್ರದಾಯದ ಒಳಗೆ ಪ್ರವೇಶ ಮಾಡಬಾರದು. ನಮ್ಮ ಸಂವಿಧಾನ ಅವರವರ ಧರ್ಮ ಪಾಲಿಸುವ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ ಎಂದು ಹೇಳಿದರು.

ನಮಗೆ ಅಧಿಕಾರ ಸಿಕ್ಕಿದಾಗ ನಾವು ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಯಾವುದೇ ಧರ್ಮದ ಆಧಾರದಲ್ಲಿ ಆಡಳಿತ ಮಾಡದೆ, ಎಲ್ಲರಿಗೂ ಒಂದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಈ ದೇಶ ಯಾವುದೇ ಒಂದು ಜಾತಿ ಅಥವಾ ಧರ್ಮದ ದೇಶವಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ, ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲರೂ ಹೋರಾಟ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವದಲ್ಲಿ ಸಾಧನೆ.. ರಘುನಂದನ್ ರಾಮಣ್ಣ ಅವರಿಗೆ ರಾಹುಲ್ ಗಾಂಧಿ ಅಭಿನಂದನೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.