ETV Bharat / city

ಗೊರಿಲ್ಲಾ ಜನ್ಮದಿನ: ವಿಶಿಷ್ಟ ರೀತಿಯಲ್ಲಿ ಆಚರಿಸಿದ ಮೈಸೂರು ಮೃಗಾಲಯ ಸಿಬ್ಬಂದಿ - ತರಕಾರಿ ಜೋಡಿಸಿ ಗೊರಿಲ್ಲಾ ಜನ್ಮಸಂಭ್ರಮ

ವಿವಿಧ ತರಕಾರಿಗಳನ್ನು 'ವಿಶ್​ ಯೂ ಹ್ಯಾಪಿ ಬರ್ತ್‌ಡೇ ಡೆಂಬ' ಎಂದು ಜೋಡಿಸಿ ಗೊರಿಲ್ಲಾದ ಜನ್ಮದಿನವನ್ನು ಮೃಗಾಲಯದ ಸಿಬ್ಬಂದಿ ವಿಶಿಷ್ಟ ರೀತಿಯಲ್ಲಿ ಆಚರಿಸಿ ಶುಭ ಕೋರಿದ್ದಾರೆ.

gorilla
ಗೊರಿಲ್ಲಾ ಜನ್ಮದಿನ
author img

By

Published : Jan 14, 2022, 7:43 PM IST

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಗೊರಿಲ್ಲಾದ ಜನ್ಮದಿನವನ್ನು ವಿವಿಧ ತರಕಾರಿಗಳನ್ನು ಜೋಡಿಸಿ ವಿಶಿಷ್ಟ ರೀತಿಯಲ್ಲಿ ಇಂದು ಆಚರಣೆ ಮಾಡಲಾಯಿತು.

ಮೈಸೂರು ಮೃಗಾಲಯದಲ್ಲಿ‌ ಗೊರಿಲ್ಲಾ ಜನ್ಮದಿನ ಸಂಭ್ರಮ

ಜರ್ಮನಿಯಿಂದ ಕಳೆದ ಅಕ್ಟೋಬರ್​ನಲ್ಲಿ ಮೈಸೂರಿನ ಮೃಗಾಲಯಕ್ಕೆ ತರಲಾಗಿದ್ದ ಎರಡು ಸಹೋದರ ಗೊರಿಲ್ಲಾಗಳಲ್ಲಿ ಒಂದಾದ ಡೆಂಬ ಹೆಸರಿನ ಗೊರಿಲ್ಲಾಗೆ ಇಂದು 9ನೇ ವರ್ಷದ ಜನ್ಮ ಸಂಭ್ರಮ. ಹೀಗಾಗಿ ಅದು ತಿನ್ನುವ ವಿವಿಧ ತರಕಾರಿಗಳನ್ನು 'ವಿಶ್​ ಯೂ ಹ್ಯಾಪಿ ಬರ್ತ್‌ಡೇ ಡೆಂಬ' ಎಂದು ಜೋಡಿಸಿ ಮೃಗಾಲಯದ ಸಿಬ್ಬಂದಿ ವಿಶಿಷ್ಟ ರೀತಿಯಲ್ಲಿ ಆಚರಿಸಿ ಶುಭ ಕೋರಿದ್ದಾರೆ.

ಇದನ್ನು ಮೃಗಾಲಯಕ್ಕೆ ಆಗಮಿಸಿದ್ದ ಪ್ರವಾಸಿಗರು ಕಂಡು ಫೋಟೋ, ವಿಡಿಯೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: ಕೊರೊನಾ ನಿರ್ಬಂಧ : ಮೈಸೂರಿನ ಸುತ್ತೂರು ಶಿವರಾತ್ರೀಶ್ವರ ಜಾತ್ರೋತ್ಸವ ರದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.